ನಿರ್ಮಾಪಕ ಸ್ಥಾನಕ್ಕೆ ಪರೀಕ್ಷೆ ಬರೆದಿದ್ದೇನೆ ಫಲಿತಾಂಶ ಜನರು ಕೊಡ್ತಾರೇ:ತರಂಗ ವಿಶ್ವ

210 Views

ನಂದಿನಿ ಮೈಸೂರು

ಬೇರೆ ಭಾಷೆ ಸಿನಿಮಾ ನಾವು ನೋಡ್ತೀವಿ ನಮ್ಮ ಕನ್ನಡ ಚಿತ್ರ ಅವರು ನೋಡಬೇಕು:ನಿರ್ಮಾಪಕ,ನಟ ತರಂಗ ವಿಶ್ವ

ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ ಗಿರ್ಕಿ ಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದು ಇದೆ ಜುಲೈ 8 ರಂದು ರಾಜ್ಯಾದಾಧ್ಯಂತ ಬಿಡುಗಡೆಯಾಗಲಿದೆ.

ಈ ಗಿರ್ಕಿ ಸಿನಿಮಾವನ್ನು ಸ್ಯಾಂಡಲ್​ವುಡ್​ ನಿರ್ದೇಶಕ ಯೋಗರಾಜ್ ಭಟ್ ಅವರ ಶಿಷ್ಯ ವೀರೇಶ್ ಪಿ.ಎಂ ನಿರ್ದೇಶಿಸಿದ್ದಾರೆ‌. ಎದಿತ್ ಫಿಲಂ ಫ್ಯಾಕ್ಟರಿ ಮತ್ತು ವಾಸುಕಿ ಮೂವೀಸ್​ ಸಹಯೋಗದೊಂದಿಗೆ ನಟ ತರಂಗ ವಿಶ್ವ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ವೀರೇಶ್ ಅವರಿಗೆ ಇದು ಮೊದಲ ಚಿತ್ರವಾಗಿದ್ದು, ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನು ಈ ಸಿನಿಮಾಗಾಗಿ ಜಯಂತ ಕಾಯ್ಕಿಣಿ ಅವರು ಕದಿಯಲೇನು ಎಂಬ ಹಾಡನ್ನು ಬರೆದಿದ್ದು A2 music ಮೂಲಕ  ಹಾಡು ಬಿಡುಗಡೆಯಾಗಿದ್ದು, ಜನರಿಗೆ ಈಗಾಗಲೇ ಇಷ್ಟವಾಗಿದ್ದು, ಇನ್ನೂ ಹೈಪ್ ಮೂಡಿಸುವ ನಿರೀಕ್ಷೆಯಲ್ಲಿ ಸಿನಿತಂಡವಿದೆ. ಇನ್ನು ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಹಾಡಿನ ಶೂಟಿಂಗ್ ಆಗಿದ್ದು,  ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿನ್ಮಯ್ ಶ್ರೀಪಾದ ಈ ಸುಮಧುರವಾದ ಹಾಡನ್ನು ಹಾಡಿದ್ದು. ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ವಿಲೋಕ್ ರಾಜ್ ಹಾಗೂ ದಿವ್ಯಾ ಉರುಡುಗ ಅಭಿನಯಿಸಿದ್ದಾರೆ.
ಛಾಯಾಗ್ರಾಹಕ ನವೀನ್ ಕುಮಾರ್ ಛಲ್ಲ ಅವರ ಛಾಯಾಗ್ರಹಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಿದ್ದಾರೆ. ಹಾಗೆಯೇ ಮೋಹನ್ ಅವರ ನೃತ್ಯ ನಿರ್ದೇಶನ ಕೂಡ ನೋಡುಗರ ಗಮನ ಸೆಳೆಯುತ್ತಿದ್ದು, ಒಟ್ಟಾರೆಯಾಗಿ ಜನರಿಗೆ ಮೋಡಿ ಮಾಡಿದೆ.
ಈ ಹಿಂದೆ ಇದೇ ಸಿನಿಮಾದ ಯೋಗರಾಜ್ ಭಟ್ ಅವರು ಬರೆದಿರುವ ಎಣ್ಣೆ ಸಾಂಗ್ ಕೂಡ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಚಿತ್ರದ ಲವ್ ಸಾಂಗ್ ಬಿಡುಗಡೆಯಾಗಿದ್ದು, ಜುಲೈ 8 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಮತ್ತೊಂದು ವಿಶೇಷ ಎಂದರೆ, ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ವೀರೇಶ್.ಪಿ.ಎಂ ಹಾಡುಗಳನ್ನು ಬರೆದಿದ್ದಾರೆ. ಈ ಚಿತ್ರಕ್ಕೆ ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರಿದ್ದು,  ಹಾಸ್ಯ ಕಲಾವಿದರಾಗಿ ಮನೆಮಾತಾಗಿರುವ ತರಂಗ ವಿಶ್ವ ಹಾಗೂ ವಿಲೋಕ್ ರಾಜ್ ನಾಯಕರಾಗಿ ನಟಿಸಿದ್ದು, ಬಿಗ್​ಬಾಸ್ ಖ್ಯಾತಿಯ​ ಉರುಡುಗ ಹಾಗೂ ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರದ ಮೂಲಕ ವಿಲೋಕ್ ರಾಜ್ ನಾಯಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟೀಸರ್ ನೋಡಿರುವ ಸಿನಿರಸಿಕರು ವಿಲೋಕ್ ರಾಜ್ ಅವರ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಿರ್ಮಾಪಕ ,ನಟ ತರಂಗ ವಿಶ್ವ ಮಾಧ್ಯಮದೊಂದಿಗೆ ಮಾತನಾಡಿ ವೀರೇಶ್ ಗಿರ್ಕಿ ಚಿತ್ರದ ನಿರ್ದೇಶಕರಾಗಿದ್ದಾರೆ.ಹ್ಯಾಸ ನಟನಾಗಿ ಚಿತ್ರರಂಗ ಪ್ರವೇಶಿಸಿ 26 ವರ್ಷ ದುಡಿದು ಇದೀಗ ನಿರ್ಮಾಪಕನಾಗಿದ್ದೇನೆ.ವಾಸುಕಿ ಮೂವಿ ಪ್ರೋಡೆಕ್ಷನ್ ,ಎಡಿತ್ ಫಿಲ್ಮ್ ಫ್ಯಾಕ್ಟರಿಯ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಾಗಿದೆ.ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ನಾನು ಮತ್ತೆ ವಿಲೋಕ್ ರಾಜ್ ನಟರಾಗಿದ್ದೇವೆ.ದಿವ್ಯ ಉರುಡುಗ ,ರಾಶಿ ಮಹದೇವ್ ನಾಯಕಿಯಾಗಿ ನಟಿಸಿದ್ದಾರೆ.ಹಾಡಿಗಳು ಈಗಾಗಲೇ ಬಿಡುಗಡೆಯಾಗಿದ್ದು ಮೆಚ್ಚುಗೆ ವ್ಯಕ್ತವಾಗಿದೆ.

ತಮಿಳು,ತೆಲಗು,ಹಿಂದಿ ಹೀಗೆ ಬೇರೆ ಭಾಷೆಗಳ ಚಿತ್ರ ನಮಗೆ ನೋಡುವಂತೆ ಇಲ್ಲಿಗೆ ಕಳಿಸುತ್ತಾರೆ.ಹಾಗೇಯೇ ಅವರು ನಮ್ಮ ಕನ್ನಡ ಭಾಷೆಯ ಚಿತ್ರವನ್ನು ಅವರು ಕೂಡ ನೋಡಬೇಕು ಅಂತ ಮನವಿ ಮಾಡುತ್ತೇನೆ.ಇದೇ ಜುಲೈ 8 ರಂದು ಚಿತ್ರ ಬಿಡುಗಡೆಯಾಗಲಿದೆ ನಮ್ಮನ್ನ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು .

Leave a Reply

Your email address will not be published.