ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆದ ಅನನ್ಯಳನ್ನ ಅಭಿನಂದಿಸಿದ ಗಂಗಾಧರ ಗೌಡ

285 Views

ಪಿರಿಯಾಪಟ್ಟಣ:7 ಜುಲೈ 2022

ನಂದಿನಿ ಮೈಸೂರು/ಸತೀಶ್ ಆರಾಧ್ಯ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ತಾಲೂಕಿನ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳನ್ನು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಗೌಡ ಅಭಿನಂದಿಸಿ ಉನ್ನತ ಶಿಕ್ಷಣಕ್ಕೆ ಶುಭ ಕೋರಿದರು. 

ಚಪ್ಪರದಹಳ್ಳಿ ಗ್ರಾಮದ ಅನನ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಹಾಗೂ ಅಂಬಲಾರೆ ಗ್ರಾಮದ ಅನುಶ್ರೀ ಶೇ.97 ಅಂಕ ಪಡೆದು ಉತ್ತೀರ್ಣರಾದ ಹಿನ್ನೆಲೆ ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಗೌಡ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ ಶಿಕ್ಷಣ ಜೀವನದ ದಿಕ್ಕು ಬದಲಾಯಿಸುವ ಮಹತ್ವ ಹೊಂದಿದ್ದು ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗೆ ಹೆಚ್ಚು ಒತ್ತು ನೀಡಿ ಗುರು ಹಿರಿಯರು ಹಾಗೂ ಪೋಷಕರ ಮಾರ್ಗದರ್ಶನದಲ್ಲಿ ಉತ್ತಮ ವ್ಯಾಸಂಗ ಮಾಡುವ ಮೂಲಕ ಸಾಧನೆಯ ಗುರಿಯೊಂದಿಗೆ ಪ್ರಶಂಸನೀಯ ಫಲಿತಾಂಶ ಪಡೆದಾಗ ಶಿಕ್ಷಕರು ಹಾಗೂ ಪೋಷಕರಿಗೆ ಉತ್ತಮ ಹೆಸರು ಬರುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಕೋರಿದರು.

ಈ ಸಂದರ್ಭ ಗಂಗಾಧರ್ ಗೌಡ ಅವರ ಪತ್ನಿ   ಲೀಲಾವತಿ , ಯುವ ಮುಖಂಡರಾದ ತೆಲಗಿನಕುಪ್ಪೆ ಗ್ರಾಮದ ಟಿ.ಆರ್ ಕಿರಣ್, ಹಬಟೂರು ಹರೀಶ್ ಇದ್ದರು.

Leave a Reply

Your email address will not be published. Required fields are marked *