ನಂದಿನಿ ಮೈಸೂರು
*ತುಂಬಲ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನ ಆಚರಣೆ*
ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲ್ಲೂಕಿನ ತುಂಬಲ ಗ್ರಾಮದ ಪಿಎಂಶ್ರೀ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಖ್ಯಾತ ವಿಜ್ಞಾನಿ ಶ್ರೀಮತಿ ರೂಪಾ ಎಂ . ವಿ ರವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ತುಂಬಲ ಶಾಲೆಯ ವಿದ್ಯಾರ್ಥಿಗಳಾದ ರಂಜಿತಾ, ರಮ್ಯಾ,ಸಿಂಚನ ಮತ್ತು ದಿಕ್ಷಿತಾ ರವರು ರಾಷ್ಟೀಯ ವಿಜ್ಞಾನ ದಿನದ ಹಿನ್ನೆಲೆ ಮತ್ತು ಭಾರತದ ಖ್ಯಾತ ವಿಜ್ಞಾನಿ ಸರ್ ಸಿವಿ ರಾಮನ್ ರವರ ಜೀವನ ಚರಿತ್ರೆ ಮತ್ತು ಚಂದ್ರಯಾನ ಒಂದು ಎರಡು ಮೂರರ ಬಗ್ಗೆ ವಿಸ್ತೃತವಾದ ಮಾಹಿತಿಯನ್ನು ಮಂಡನೆ ಮಾಡಿ ಇಸ್ರೋ ವಿಜ್ಞಾನಿ ರೂಪ ರವರಿಂದ ಮೆಚ್ಚುಗೆ ಪಡೆದುಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇಸ್ರೋ ಸಂಸ್ಥೆಯ ಚಂದ್ರಯಾನ -3 ಯೋಜನಾ ನಿರ್ದೇಶಕರಾದ ಎಂ.ವಿ ರೂಪಾ ರವರು ಇಸ್ರೋ ಸಂಸ್ಥೆಯ ಬಗ್ಗೆ ಮಾಹಿತಿ ಜೊತೆಗೆ ಚಂದ್ರಯಾನ -1 ,2 ರ ಉಡಾವಣೆ ಅದರ ಉದ್ದೇಶ ಮತ್ತು ವಿಫಲತೆಯನ್ನು ತಿಳಿಸುವುದರ ಜೊತೆಗೆ ಚಂದ್ರಯಾನ -3 ರ ಉಡಾವಣೆ ಮಾಡಲು ಇಸ್ರೋ ವಿಜ್ಞಾನಿಗಳು ಪಟ್ಟಶ್ರಮ ಹಾಗೂ ಅದರ ಸಫಲತೆಯ ಪ್ರತಿ ಹಂತವನ್ನು ದೃಶ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ SDMC ಅಧ್ಯಕ್ಷ ನಂದೀಶ್, ತುಂಬಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ,ಕಾರ್ಯದರ್ಶಿ ಪ್ರವೀಣ್ ಕುಮಾರ್,ಕುಪ್ಯ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ,BRP ಶಿರಿದೇವಿ,ಮುಖ್ಯ ಶಿಕ್ಷಕ ರಾಯಪ್ಪ,CRP ಶ್ರೀಧರ್ ಟಿ. ಏನ್ ,ಮುಂತಾದವರು ಹಾಜರಿದ್ದರು.