ನಂದಿನಿ ಮೈಸೂರು
ಉತ್ಸಾಹವೇ ಉದ್ಯಮವಾದಾಗ : ದ್ವಿಚಕ್ರ ವಾಹನಗಳ ಉದ್ಯಮಶೀಲ ಉತ್ಸಾಹಿಗಳಿಗೆ DriveX ಸ್ಫೂರ್ತಿ”
ಅರವಿಂದ ಎಚ್.ಆರ್. ಅವರಿಗೆ ದ್ವಿಚಕ್ರ ವಾಹನಗಳ ಉದ್ಯಮದಲ್ಲಿ ತುಂಬ ಆಸಕ್ತಿಯಿತ್ತು. ಮೋಟಾರ್ ಬೈಕ್‌ಗಳ ಕುರಿತು ಅವರಿಗಿದ್ದ ಒಲವನ್ನು ಅವರು ಸರಿದಾರಿಯಲ್ಲಿ ಮುನ್ನಡೆಸಿ, ಮೂರು zcದಶಕಗಳಿಂದ ಈ ಕ್ಷೇತ್ರದ ವೃತ್ತಿಯಲ್ಲಿ ಯಶಸ್ವಿಯಾಗಿ ಪಯಣಿಸುವಂತೆ ಮಾಡಿದೆ. ಪ್ರಮುಖ OEM ಗಳಲ್ಲಿ 25 ವರ್ಷಗಳಿಂದ ಅವರು ಗುರುತಿಸಿಕೊಂಡಿದ್ದಾರೆ. ಮೂರು ದಶಕಗಳನ್ನು ಕಳೆದ ಮೇಲೆ ಅವರ ಕೌಶಲಗಳು, ಅನುಭವ ಮತ್ತು ಒಲವನ್ನು ಸಂಭಾವ್ಯ ಪ್ರಿ-ಓನ್ಡ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯ ಕ್ಷೇತ್ರದಲ್ಲಿ ವಾಣಿಜ್ಯೋದ್ಯಮವನ್ನು ಆರಂಭಿಸುವ ಮೂಲಕ ಬಳಸಿಕೊಳ್ಳುವಂತೆ ಅವರಿಗೆ ಪ್ರೇರಣೆ ನೀಡಲಾಯಿತು. DriveX ಜೊತೆಗಿನ ಅವರ ಸಹಯೋಗವು ಮಹತ್ವದ ಕ್ಷಣವಾಗಿ ಪರಿಣಮಿಸಿತು ಹಾಗೂ ಸ್ವಂತ ಉದ್ಯಮ ಸ್ಥಾಪಿಸುವಂತೆ ಮಾಡಿತು. ಬೆಂಗಳೂರಿನಲ್ಲಿ ಶ್ರೀ ಸುಕ್ರ ಆಟೊಮೊಬೈಲ್ಸ್ ಸಂಸ್ಥೆ ತಲೆ ಎತ್ತಿತು. 2025ರ ವೇಳೆಗೆ USD 10 ದಶಲಕ್ಷ ಮೌಲ್ಯದ ಮಾರುಕಟ್ಟೆಯಾಗುವ ಹಾಗೂ ವಾರ್ಷಿಕ 10% ಬೆಳವಣಿಗೆಯ ಸಾಮರ್ಥ್ಯವಿರುವ ಅಭಿವೃದ್ಧಿಶೀಲ ಪ್ರಿ-ಓನ್ಡ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಕ್ಷೇತ್ರದಲ್ಲಿ ಅವರನ್ನು ಮುನ್ನೆಲೆಯ ಉದ್ಯಮಿಯಾಗಿ ರೂಪಿಸಿತು.
ಅರವಿಂದ್ ಹೇಳುತ್ತಾರೆ, “ದ್ವಿಚಕ್ರ ವಾಹನ ಉದ್ಯಮದ ಸಾಮರ್ಥ್ಯದಿಂದ ನಾನು ಪ್ರಭಾವಿತನಾಗಿದ್ದೆ. ಟಾಪ್ ಬ್ರ್ಯಾಂಡ್‌ಗಳ ಜೊತೆಗೆ 30 ವರ್ಷಗಳ ಕಾಲ ಕೆಲಸ ಮಾಡಿದ ಅನುಭವದ ಕಾರಣ, ನವೀಕರಣದ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳನ್ನು ಅನ್ವೇಷಿಸಲು ನಾನು ಉತ್ಸುಕನಾಗಿದ್ದೆ. DriveX ಜೊತೆಗಿನ ಸಹಯೋಗವು ನನ್ನ ಕನಸನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿದೆ, ಉದ್ಯಮವನ್ನು ಸ್ಥಾಪಿಸುವ ನನ್ನ ಕನಸನ್ನು ಸಾಕಾರಗೊಳಿಸಿ, ಅವರ ಜೊತೆ ಸೇರಿ ಪ್ರಿ-ಓನ್ಡ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯನ್ನು ಕ್ರಾಂತಿಕಾರಕವಾಗಿಸಲು ನನಗೆ ಅನುವು ಮಾಡಿಕೊಡುತ್ತದೆ.”
ನಮ್ಮ ಜೊತೆಗಿನ ಸಹಯೋಗವು ಅರವಿಂದ್ ಅವರನ್ನು ನಮ್ಮ ಸಂಪೂರ್ಣ ಸಂಯೋಜಿತ ವೇದಿಕೆಯಲ್ಲಿ ಪಾಲುದಾರರಾಗಿ ಉನ್ನತೀಕರಿಸಿದೆ, ಭಾರತದಲ್ಲಿ ಪ್ರಿ-ಓನ್ಡ್ ದ್ವಿಚಕ್ರ ವಾಹನಗಳ ಪರಿಸರ ವ್ಯವಸ್ಥೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಈ ಪಾಲುದಾರಿಕೆಯು ಸಮಗ್ರವಾದ, ಸರಳೀಕೃತ, ವಿಶ್ವಾಸಾರ್ಹ ಮತ್ತು ಜಂಜಾಟಗಳಿಲ್ಲದ ಖರೀದಿ ಅನುಭವವನ್ನು ಪ್ರಸ್ತುತಪಡಿಸುವ ಪ್ರಿ-ಓನ್ಡ್ ವಾಹನ ಸೇವೆಗಳನ್ನು ನೀಡಲು ಅವರನ್ನು ಶಕ್ತರನ್ನಾಗಿಸಿದೆ. ಅತ್ಯಾಧುನಿಕ ನವೀಕರಣ ಸೌಲಭ್ಯ, ಡಿಜಿಟಲ್ ರಿಟೇಲ್ ವೇದಿಕೆ, ಇನ್-ಹೌಸ್ ದಾಖಲೀಕರಣ, ಫೈನಾನ್ಸ್, ಮತ್ತು ಮಾರಾಟದ ಬಳಿಕ ಸರ್ವಿಸ್ ನೀಡುವ ವ್ಯವಸ್ಥೆಯ ಬೆಂಬಲದೊಂದಿಗೆ ಅರವಿಂದ್ ಅವರು ತಮ್ಮ ಗ್ರಾಹಕರಿಗೆ ಸಂತೋಷಭರಿತ ಖರೀದಿ ಅನುಭವ ಒದಗಿಸುತ್ತಿದ್ದಾರೆ ಎಂದು DriveX ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ಮತ್ತು ನಿರ್ದೇಶಕ ನಾರಾಯಣ್ ಕಾರ್ತಿಕೇಯನ್ ಬಣ್ಣಿಸಿದ್ದಾರೆ.
ಯಶಸ್ವಿ ಡೀಲರ್‌ಶಿಪ್ ಸಂಸ್ಥೆಯನ್ನು ಸ್ಥಾಪಿಸುವುದಲ್ಲದೆ, DriveX ಅರವಿಂದ್ ಅವರಂತಹವರಿಗೆ ಗುಣಮಟ್ಟದ ಭರವಸೆ, ವಾಹನ ಮತ್ತು ಬಿಡಿಭಾಗಗಳ ಮಾರಾಟ, ನವೀಕರಣ ಸಿಬ್ಬಂದಿ, ಸೇವಾ ಸಹಯೋಗಗಳು, ಸೇರಿದಂತೆ ಅಸಂಖ್ಯಾತ ಅನುಕೂಲಗಳನ್ನು ಒದಗಿಸುತ್ತದೆ. ಈ ಪ್ರಯೋಜನವು ಸುಸ್ಥಿರ ಆದಾಯಕ್ಕೆ ಬಲ ತುಂಬುವುದಲ್ಲದೆ, ಉದ್ಯಮವನ್ನು ಸ್ಥಾಪಿಸುವ ಕನಸನ್ನು ನನಸಾಗಿಸುವುದಕ್ಕೆ ಅಗತ್ಯವಾದ ಉದ್ಯಮಶೀಲ ಬೆಂಬಲವನ್ನೂ ನೀಡುತ್ತದೆ.