*ಗಿಡ ನೆಡುವ ಮೂಲಕ ಯುವಕರಲ್ಲಿ ಪರಿಸರ ಜಾಗೃತಿ*

ನಂದಿನಿ ಮೈಸೂರು

*ಗಿಡ ನೆಡುವ ಮೂಲಕ ಯುವಕರಲ್ಲಿ ಪರಿಸರ ಜಾಗೃತಿ*

ಮೈಸೂರು ಫೆ.27:- ಇಂದು ಚೋರನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 50ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಸ್ಥಳೀಯ ಯುವಜನರು ಪರಿಸರದ ಮೇಲಿನ ಕಾಳಜಿಯನ್ನು ವ್ಯಕ್ತಪಡಿಸಿದರು.

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ವರುಣ ಗ್ರಾಮ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೋರನಹಳ್ಳಿ ಇವರ ಸಹಯೋಗದಲ್ಲಿ ಅಲ್ಲಿನ ಯುವಜನರು ಪಾಳು ಬಿದ್ದಿದ್ದ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಿ, ಬೇವು, ಬೇಲ, ಹೊಂಗೆ, ಸಂಪಿಗೆ, ನೇರಳೆ, ಹಲಸು, ಸೀತಾಫಲ, ದಾಳಿಂಬೆ ಮುಂತಾದ ಗಿಡಗಳನ್ನು ನೆಟ್ಟು, ನೀರೆರೆದರು.

ಊರಿನ ಗ್ರಾಮಸ್ಥರು ಯುವಕರು ಹಾಗೂ ಶಾಲೆಯ ಮಕ್ಕಳು ಪ್ರತಿಯೊಂದು ಗಿಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಗಿಡಗಳ ಸಂರಕ್ಷಣೆಯನ್ನು ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಶಾಲಿನಿ, ವೀಣಾ, ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಗ್ರಾಮಸ್ಥರು, ಶಾಲಾ ಶಿಕ್ಷಕರು ಯುವಕರು ಹಾಗೂ ಮಕ್ಕಳು ಸೇರಿದ್ದರು.

Leave a Reply

Your email address will not be published. Required fields are marked *