ನಂದಿನಿ ಮೈಸೂರು
ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ Trinity College, Better Me Journey to Health, in Association with Arnold Fitness ಸಹಯೋಗದಲ್ಲಿ ಯೋಗ ಮತ್ತು ಜುಂಭ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈಸೂರಿನ ವಿಜಯನಗರ ಕೆ ಡಿ ರಸ್ತೆಯಲ್ಲಿರುವ ಫುಟ್ ಬಾಲ್ ಮೈದಾನದಲ್ಲಿ Trinity
ಕಾಲೇಜಿನ ವಿಧ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಕಾಲೇಜಿನ ಗಣ್ಯರು ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
ಬೆಳಗ್ಗೆ 7 ರಿಂದ ಆರಂಭವಾಗಿ 10:00 ವರಗೆ ನಡೆಯಿತು.
ಮೊದಲಿಗೆ ಡಾ.ಸೌಮ್ಯ ಸುಬ್ರಮಣ್ಯರವರಿಂದ ಯೋಗ ಕಾರ್ಯಕ್ರಮ ನಂತರ ಯೋಗ ಟೀಚರ್ ಪ್ರತಿಮಾ ಗಿರಿಧರ್ ಫಿಟ್ನೆಸ್ ಬಗ್ಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ತದನಂತರ ಮಕ್ಕಳಿಗಾಗಿ ವಿಶೇಷವಾಗಿ ದೀಪಕ್ ಹಾಗೂ ಅನನ್ಯ ರವರು ಜುಂಭ ಸೆಸ್ಸೆನ್ ನಡೆಸಿದರು.
ಕಾರ್ಯಕ್ರಮದಲ್ಲಿ Arnold fitness founder ಹರ್ಷ,ಪ್ರೀನ್ಸಿಪಲ್ ಡಾ. ಶಮಾ ಇ ಮಿಲ್ಟನ್, ಕಾಲೇಜ್ ಛೇರ್ಮನ್ ಎಲೈಜ಼ರ್ ಮಿಲ್ಟನ್ ಸೇರಿದಂತೆ ಕಾಲೇಜಿನ ಶಿಕ್ಷಕರು,ವಿಧ್ಯಾರ್ಥಿಗಳು ಭಾಗಿಯಾಗಿದ್ದರು.