ನಂದಿನಿ ಮೈಸೂರು
ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷರಾಗಿ ವಿ. ಸೋಮಣ್ಣನವರನ್ನು ನೇಮಕ ಮಾಡುವಂತೆ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಜಿಲ್ಲಾ ಸಹ ವಕ್ತಾರರಾದ ಡಾ.ಕೆ. ವಸಂತ್ ಕುಮಾರ್ ಆಗ್ರಹಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಸಂಘಟನಾತ್ಮಕ ವ್ಯವಸ್ಥೆಯನ್ನು ಹೊಂದಿದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಸಂಘಟನೆಯಲ್ಲಿ ಸಂಘಟನಾತ್ಮಕ ಬದಲಾವಣೆಗಳು ನಡೆಯುತ್ತವೆ ಆ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಿಂದ ಹಿಡಿದು ತಾಲೂಕು ಅಧ್ಯಕ್ಷರ ವರೆಗೆ ಬದಲಾವಣೆಗಳಾಗಿ ಹೊಸ ಪದಾಧಿಕಾರಿಗಳ ಆಯ್ಕೆಯಾಗುತ್ತದೆ, ಕರ್ನಾಟಕ ರಾಜ್ಯದ ಮುಂದಿನ ರಾಜ್ಯ ಅಧ್ಯಕ್ಷರಾಗಿ ಮಾನ್ಯ ಮಾಜಿ ಸಚಿವರಾದ ವಿ. ಸೋಮಣ್ಣನವರು ಸೂಕ್ತ ಅಭ್ಯರ್ಥಿಯಾಗಿದ್ದು ರಾಜ್ಯದ್ಯಂತ ಪ್ರವಾಸ ಮಾಡಿ ಹಲವು ಉಪಚುನಾವಣೆಗಳನ್ನು ಗೆಲ್ಲಿಸಿರುವ ಚಾಣಾಕ್ಷ ಶಕ್ತಿ ಅವರಲ್ಲಿ ಇದೆ ಜೊತೆಗೆ ಯಾವುದೇ ಜಿಲ್ಲೆಗೆ ಹೋದರು ಕೂಡ ನೂರಾರು ಜನರ ಹೆಸರನ್ನು ಹಿಡಿದು ಮಾತನಾಡಿಸುವಂತಹ ಒಂದು ಜ್ಞಾಪಕ ಶಕ್ತಿ ಎಲ್ಲಾ ಸಮಾಜದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಘಟನಾತ್ಮಕ ಶಕ್ತಿ ಅವರಲ್ಲಿ ಇರುವುದರಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕಾದರೆ ವಿ. ಸೋಮಣ್ಣ ರಾಜ್ಯಾಧ್ಯಕ್ಷರಾದರೆ ಒಳ್ಳೆಯದು ಜೊತೆಗೆ ಇಲ್ಲಿಯವರೆಗೆ ಪಕ್ಷ ನೀಡಿದ ಹಲವು ಜವಾಬ್ದಾರಿ ಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಹಾಗಾಗಿ ರಾಷ್ಟ್ರೀಯ ನಾಯಕರು ವಿ. ಸೋಮಣ್ಣನವರನ್ನು ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಈ ಮೂಲಕ ಕೇಂದ್ರದ ವರಿಷ್ಠರಲ್ಲಿ ಮನವಿಯನ್ನು ಮಾಡುತ್ತೇನೆ ಎಂದರು.