ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯಲ್ಲಿ 421 ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಅಳವಡಿಸಿ ಕಾರ್ಯಾರಂಭ

ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಈಗ ಆರ್ಬ್ ಎನರ್ಜಿ ಸಂಸ್ಥೆಯ 421- ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ವಿದ್ಯುತ್‍ನಿಂದ ಕಾರ್ಯನಿರ್ವಹಿಸುತ್ತಿದೆ

ಕರ್ನಾಟಕದ ಮೈಸೂರಿನಲ್ಲಿರುವ ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯು ಅವರ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ನಿಂದ ವರ್ಷಕ್ಕೆ ರೂ. 46 ಲಕ್ಷಕ್ಕಿಂತ ಹೆಚ್ಚು ಉಳಿಸಲಿದ್ದು, ಕೇವಲ 3 ವರ್ಷ 9 ತಿಂಗಳುಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಮರಳಿ ಪಡೆಯಲಿದೆ

ಮೈಸೂರು: ಆರ್ಬ್ ಎನರ್ಜಿ ಇಂದು ಕರ್ನಾಟಕದ ಮೈಸೂರಿನ ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯಲ್ಲಿ 421 ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಅಳವಡಿಸಿ ಕಾರ್ಯಾರಂಭ ಮಾಡಿದೆ ಎಂದು ಇಂದು ಪ್ರಕಟಿಸಿತು. ಈ ಅಳಡಿಕೆಯಿಂದ ಕಾರ್ಖಾನೆಯ ವಿದ್ಯುತ್ ಅಗತ್ಯಗಳನ್ನು ಪೂರೈಸಲು ಸೌರಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಸಾಯಿ ಕಾರ್ಟನ್ ತನ್ನ ಉತ್ಪಾದನಾ ಕೆಲಸದಲ್ಲಿ ವರ್ಷಕ್ಕೆ 5.8 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಸಹಾಯ ಮಾಡುತ್ತದೆ.

“ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ತಮ್ಮ 421 ಕಿಲೋವ್ಯಾಟ್ ಮೇಲ್ಫಾವಣಿ ಸೋಲಾರ್ ಸಿಸ್ಟಮ್ ಅನ್ನು ವಿನ್ಯಾಸಗೊಳಿಸಲು, ಪೂರೈಸಲು ಮತ್ತು ಸ್ಥಾಪಿಸಲು ಆರ್ಬ್ ಎನರ್ಜಿಯನ್ನು ಆಯ್ಕೆ ಮಾಡಿರುವುದು ನಮಗೆ ಅತ್ಯಂತ ಸಂತಸ ತಂದಿದೆ. ಮೇಲ್ಫಾವಣಿ ಸೋಲಾರ್ ಎನರ್ಜಿಯು ಈಗ ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯನಲ್ಲಿ ತಮ್ಮ ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಅವರ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ. ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್ ಸ್ವಚ್ಛ, ಹಸಿರು ಸೋಲಾರ್ ವಿದ್ಯುತ್ತಿಗೆ ಬದಲಾಯಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ” ಎಂದು ಆರ್ಬ್ ಎನರ್ಜಿಯ ಪಿವಿ ಪ್ರಾಜೆಕ್ಟ್ಸ್‍ನ ಉಪಾಧ್ಯಕ್ಷರಾದ ಸುಧೀಂದ್ರ ಟಿ. ರವರು ಹೇಳಿದರು.

ಸಾಮಾನ್ಯವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಮೇಲ್ಫಾವಣಿ ಸೋಲಾರ್‍ನಿಂದ 3 ರಿಂದ 4 ವರ್ಷಗಳಲ್ಲಿ ಅವರು ಹೂಡಿಕೆ ಮಾಡಿರುವ ಹಣವು ಮರುಪಾವತಿಯಾಗುತ್ತದೆ – ಅಂದರ ನಂತರ ಸೌರಶಕ್ತಿಯಿಂದ ವಿದ್ಯುತ್ ವೆಚ್ಚವು ಪರಿಣಾಮಕಾರಿಯಾಗಿ ಉಚಿತವಾಗುತ್ತದೆ. ಎಲ್ಲಾ ಎಸ್.ಎಮ್.ಇ.ಗಳಿಗೆ ಮೇಲ್ಛಾವಣಿ ಸೋಲಾರ್ ಹೆಚ್ಚು ಕೈಗೆಟುಕುವಂತೆ ಮಾಡಲು, ಆರ್ಬ್ ತನ್ನದೇ ಆದ ಆಂತರಿಕ, ಮೇಲಾಧಾರ-ಮುಕ್ತ ಸೋಲಾರ್ ಫೈನಾನ್ಸ್ ಅನ್ನು 5 ವರ್ಷಗಳ ಅವಧಿಯವರೆಗೆ ನೀಡುತ್ತದೆ. ಆರ್ಬ್ ಮೇಲ್ಛಾವಣಿಯ ಸೋಲಾರ್ ಲಂಬಾತ್ಮಕವಾಗಿ ಸಂಯೋಜಿತ ಪೂರೈಕೆದಾರ ಸಂಸ್ಥೆಯಾಗಿದ್ದು, ಇದು ತನ್ನದೇ ಆದ ಸೋಲಾರ್ ಫಲಕಗಳನ್ನು ತಯಾರಿಸುತ್ತದೆ. ಅಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ತನ್ನದೇ ಆದ ಆಂತರಿಕ ಹಣಕಾಸನ್ನು ಸಹ ಒದಗಿಸುತ್ತದೆ. ಹೀಗಾಗಿ ಇದು ಭಾರತದ ಮೇಲ್ಛಾವಣಿ ಸೋಲಾರ್ ಉದ್ಯಮದಲ್ಲಿ ಸಂಪೂರ್ಣವಾಗಿ ಅನನ್ಯ ಕೊಡುಗೆಯಾಗಿದೆ.

ಆರ್ಬ್ ಎನರ್ಜಿಯ ಬಗ್ಗೆ
ಆರ್ಬ್ ಎನರ್ಜಿಯನ್ನು 2006ರಲ್ಲಿ ಡಾಮಿಯನ್ ಮಿಲ್ಲರ್ ಮತ್ತು ಎನ್.ಪಿ. ರಮೇಶ್ ಅವರು ಸ್ಥಾಪಿಸಿದರು ಮತ್ತು ಆರಂಭದಿಂದ ಇಲ್ಲಿಯವರೆಗೆ ಭಾರತದಲ್ಲಿ 162,000ಕ್ಕೂ ಹೆಚ್ಚು ಸೋಲಾರ್ ಸಿಸ್ಟಮ್‍ಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆಯಾಗಿ ಭಾರತದಲ್ಲಿ ಸುಮಾರು 200+ ಮೆಗಾವ್ಯಾಟ್ ಮೇಲ್ಛಾವಣಿ ಸೋಲಾರ್ ಅಳವಡಿಕೆಗಳನ್ನು ಮಾಡಿದೆ. ಆರ್ಬ್ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಅಲ್ಲಿ ಎರಡು ಕಾರ್ಖಾನೆಗಳನ್ನು ಹೊಂದಿದೆ: ಒಂದರಲ್ಲಿ ಸೋಲಾರ್ ಫೆÇೀಟೊವೋಲ್ಟಾಯಿಕ್ ಫಲಕಗಳನ್ನು ಉತ್ಪಾದಿಸುತ್ತದೆ, ಮತ್ತೊಂದರಲ್ಲಿ ಸೋಲಾರ್ ವಾಟರ್ ಹೀಟಿಂಗ್ ಸಿಸ್ಟಮ್‍ಗಳನ್ನು ಉತ್ಪಾದಿಸುತ್ತದೆ. ಆರ್ಬ್ ಭಾರತದಲ್ಲಿ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು ಕೀನ್ಯಾದಲ್ಲಿ ಆಫ್ರಿಕಾದ ಸೋಲಾರ್ ಮಾರುಕಟ್ಟೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗಸಂಸ್ಥೆಯನ್ನು ಹೊಂದಿದೆ. ಆರ್ಬ್ ಎನರ್ಜಿಯ ಉತ್ಪನ್ನದ ಕೊಡುಗೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಭಾರತದಲ್ಲಿ +1-800-121-2282 ಮತ್ತು ವಿದೇಶದಿಂದ +91 99005 20505 ಕ್ಕೆ ಕರೆ ಮಾಡಿ ಮತ್ತು www.orbenergy.comಮೂಲಕ ನಮ್ಮನ್ನು ಭೇಟಿ ಮಾಡಿ.

ಉದ್ಘಾಟಿಸಿದವರು: ಕೃಷ್ಣ ಎಚ್‌ಟಿ – ವ್ಯವಸ್ಥಾಪಕ ನಿರ್ದೇಶಕರು, ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್, ಮೈಸೂರು ಮತ್ತು ರಾಮಪ್ರಿಯಾ ಬಿಎಸ್, ನಿರ್ದೇಶಕರು, ಸಾಯಿ ಕಾರ್ಟನ್ ಮ್ಯಾನುಫ್ಯಾಕ್ಚರಿಂಗ್, ಮೈಸೂರು

ಆರ್ಬ್ ಎನರ್ಜಿಯಿಂದ ಕಾರ್ಯಕ್ರಮದಲ್ಲಿ 
1. ವಿಕಾಸ್ ಎಲ್ – ಎಜಿಎಂ ಮಾರ್ಕೆಟಿಂಗ್
2. ಯಶವಂತ್ ಕೆ – ಮ್ಯಾನೇಜರ್ – ಪಿವಿ ಪ್ರಾಜೆಕ್ಟ್ಸ್
3. ಮಧುಕಿರಣ್ ಎಂಆರ್ – ಸೀನಿಯರ್ ಮ್ಯಾನೇಜರ್ – ಸೃಜನಾತ್ಮಕ ವಿನ್ಯಾಸ
4. ಕೇಶವಮೂರ್ತಿ – ಮ್ಯಾನೇಜರ್ – ತಾಂತ್ರಿಕ
5. ಉಮಾಶಂಕರ್ – ಸೇಲ್ಸ್ ಕೋ-ಆರ್ಡಿನೇಟರ್ ಸೇರಿದಂತೆ ಇತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *