ನಂದಿನಿ ಮೈಸೂರು
*ಲೋಹಿತ್ ಹನುಮಂತಪ್ಪ ನಿರ್ದೇಶನದ ರಾಮ್-ರಹಿಮ್ ಕಿರುಚಿತ್ರಕ್ಕೆ ಎರಡು ಅಂತರರಾಷ್ಟ್ರೀಯ ಪ್ರಶಸ್ತಿ*
ಬ್ರದರ್ಸ್ ಎಂಟರ್ಟೈನ್ಮೆಂಟ್ ತಂಡದಿಂದ ತಯಾರಿಸಲಾದ , ಲೋಹಿತ್ ಹನುಮಂತಪ್ಪ ನಿರ್ದೇಶನದಲ್ಲಿ ಮೂಡಿಬಂದಿರುವ ರಾಮ್ ರಹೀಮ್ ಕಿರುಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋಮು ಗಲಭೆಯಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವ ಪ್ರಸ್ತುತ ಸಂಧರ್ಭದಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವ ರಾಮ್ ರಹೀಮ್ ಕಿರುಚಿತ್ರವು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು ,..
ಈ ಚಿತ್ರವು ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಜಡ್ಜ್ ಗಳಿಂದ ಉತ್ತಮ ರೆಸ್ಪಾನ್ಸ್ ಕೂಡಾ ತೆಗೆದುಕೊಂಡಿದೆ,
2023 ರ ಮೇ 20 ಮತ್ತು 21ರಲ್ಲಿ ಯುನಿವರ್ಸಲ್ ಫಿಲ್ಮ್ ಮೇಕರ್ಸ್ ಕೌನ್ಸಿಲ್ ಮತ್ತು ನವಕರ್ನಾಟಕ ಫಿಲ್ಮ್ ಅಕಾಡೆಮಿ ಇವರ ಸಹಯೋಗದಲ್ಲಿ ನಡೆದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಮ್ ರಹೀಮ್ ಕಿರುಚಿತ್ರಕ್ಕೆ *ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಪ್ರಶಸ್ತಿ* ಲಭಿಸಿತು.
ಯು.ಎಸ್ ನಲ್ಲಿ ನಡೆದ 2023 SWIFF ಚಲನಚಿತ್ರೋತ್ಸವದಲ್ಲಿ
ಸುಮಾರು 120 ದೇಶಗಳಿಂದ 13,868 ಚಲನಚಿತ್ರಗಳಲ್ಲಿ ರಾಮ್ ರಹಿಮ್ ಚಿತ್ರಕ್ಕೆ *ಬೆಸ್ಟ್ ಸೂಪರ್ ಶಾರ್ಟ್ ಫಿಲ್ಮ್ ಪ್ರಶಸ್ತಿ* ಲಭಿಸಿದೆ.
ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ,
RAM-RAHIM ಚಿತ್ರದ ಕುರಿತು ಜಡ್ಜ್ ಗಳ ಕಾಮೆಂಟ್‌ಗಳು ಇಂತಿವೆ :
*ಈ ಚಿತ್ರ ನನ್ನನ್ನು ಮೂಕವಿಸ್ಮಿತರನ್ನಾಗಿಸಿತು. ಇದು ಚಿಂತನ-ಪ್ರಚೋದಕ ಮತ್ತು ಭಾವನಾತ್ಮಕವಾಗಿ ಪ್ರತಿಧ್ವನಿಸುತ್ತದೆ*
*ತೀರ್ಪುಗಾರನಾಗಿ, ನಾನು ಅನೇಕ ಚಲನಚಿತ್ರಗಳನ್ನು ನೋಡಿದ್ದೇನೆ, ಆದರೆ ಇದು ಎದ್ದು ಕಾಣುತ್ತದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಪ್ರವಾಸವಾಗಿದೆ.*
*ಅದ್ಭುತವಾದ ದೃಶ್ಯಗಳಿಂದ ಹಿಡಿದು ಧ್ವನಿ ವಿನ್ಯಾಸದವರೆಗೆ ಈ ಚಿತ್ರದ ಪ್ರತಿಯೊಂದು ಅಂಶವನ್ನು ಸೂಕ್ಷ್ಮವಾಗಿ ರಚಿಸಲಾಗಿದೆ.*
ಎಂದು ಜಡ್ಜ್ಗಳು ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ..
ವೃತ್ತಿಯಲ್ಲಿ ಪತ್ರಕರ್ತರಾಗಿರುವ
ಲೋಹಿತ್ ಹನುಮಂತಪ್ಪ ಅವರು ತಮ್ಮ ಬಿಡುವಿನ ಸಮಯದಲ್ಲಿ ಕಥೆಗಳನ್ನು ಬರೆಯುವುದು , ಚಿತ್ರಕಲೆಯಲ್ಲಿ ತೊಡಗುವುದು ಮಾಡುತ್ತ ಕಿರುಚಿತ್ರಗಳನ್ನು ತಯಾರಿಸುತ್ತಾರೆ ,
ಇವರಿಗೆ ತಮ್ಮ ಸ್ನೇಹಿತರುಗಳು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತ ಬಂದಿದ್ದಾರೆ ..
ಈ ಮೊದಲು ಕೊರೊನಾ ಸಂಧರ್ಭದಲ್ಲಿ ಹ್ಯೂಮ್ಯಾನಿಟಿ ಎಂಬ ಉತ್ತಮ ಸಂದೇಶ ಸಾರುವ ಕಿರುಚಿತ್ರ ಮಾಡಿ ಗುರುತಿಸಿಕೊಂಡಿದ್ದರು , ಇವಾಗ ರಾಮ್ ರಹೀಮ್ ಎಂಬ ಕಿರುಚಿತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡು ಪ್ರಶಸ್ತಿಗಳಿಸಿದ್ದಾರೆ
ಒಟ್ಟಾರೆ ರಾಮ್ ರಹೀಮ್ ಕಿರುಚಿತ್ರಕ್ಕೆ ಎರಡು ದೊಡ್ಡ ಮಟ್ಟದ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿರುವುದು ದೇಶಕ್ಕೆ, ರಾಜ್ಯಕ್ಕೆ, ನಮ್ಮ ಮೈಸೂರಿಗೆ ಹೆಮ್ಮೆಯ ವಿಚಾರ..