ತೃತಿಯ ಲಿಂಗಿ ಮತದಾರರಿಗೆ ಮತದಾರರ ಚೀಟಿ :ಡಾ. ಕೆ ವಿ ರಾಜೇಂದ್ರ

ನಂದಿನಿ ಮೈಸೂರು

ತೃತಿಯ ಲಿಂಗಿ ಮತದಾರರಿಗೆ ಮತದಾರರ ಚೀಟಿ :ಡಾ. ಕೆ ವಿ ರಾಜೇಂದ್ರ

ಹೆಣ್ಣು ಮತ್ತು ಗಂಡು ಅಲ್ಲದೆ ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಛಿಸುವವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳು ಆದ ಡಾ.ಕೆ ವಿ ರಾಜೇಂದ್ರ ಅವರು ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಜಿಲ್ಲಾ ಪಂಚಾಯತ್ ನ ದೇವರಾಜ ಅರಸು ಸಭಾಂಗಣದಲ್ಲಿ ತೃತೀಯ ಲಿಂಗಿ ಮತದಾರರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ 500 ತೃತಿಯ ಲಿಂಗಿಗಳಿಗೂ ಮತದಾರರ ಚೀಟಿ ದೊರೆಯಬೇಕು. ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.

ತೃತೀಯಲಿಂಗಿಗಳಾಗಿದ್ದೂ ಗುರುತಿನ ಚೀಟಿಯಲ್ಲಿ ಗಂಡು ಅಥವಾ ಹೆಣ್ಣು ಎಂದಿದ್ದು ಅದನ್ನು ತಿದ್ದುಪಡಿ ಮಾಡಿಸಿಕೊಂಡು ತೃತೀಯ ಲಿಂಗಿಗಳಾಗಿಯೇ ಗುರುತಿಸಿಕೊಳ್ಳಲು ಇಚ್ಚಿಸುವವರಿಗೆ ಜಿಲ್ಲಾಡಳಿತ ತೃತೀಯ ಲಿಂಗಿಗಳು ಎಂದೇ ಗುರುತಿಸಿ ಗುರುತಿನ ಚೀಟಿ ನೀಡುವ ಅವಕಾಶವಿದೆ . ಈ ಕುರಿತು ಚುನಾವಣೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ಡೆವಲಪ್ಮೆಂಟ್ ಆಫೀಸರಿಗೆ ಮನವಿ ನೀಡಬಹುದು ಎಂದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಮ್ ಗಾಯತ್ರಿ ಅವರು ಮಾತನಾಡಿ ನಿಮ್ಮ ಸಮುದಾಯದಲ್ಲಿ ಎಷ್ಟೇ ವಿಧಗಳಿದ್ದರೂ ಸರ್ಕಾರದಿಂದ ಸೌಲಭ್ಯ ಪಡೆಯುವಾಗ ಎಲ್ಲರೂ ಒಟ್ಟಾಗಿ ಬರಬೇಕು. ಮತದಾರರ ಚೀಟಿ ಪಡೆಯುವಲ್ಲಿ ಏನಾದರೂ ಸಮಸ್ಯೆಗಳಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಗುರುತಿನ ಚೀಟಿ ಪಡೆದುಕೊಳ್ಳಿ ಎಂದು ಸೂಚಿಸಿದರು.

ಈಗಾಗಲೇ ಮತದಾರರ ಪಟ್ಟಿಯಲ್ಲಿ 210 ತೃತೀಯ ಲಿಂಗಿಗಳು ನೋಂದಣಿಯಾಗಿದ್ದು ಉಳಿದವರೂ ಆದಷ್ಟು ಬೇಗ ಮತದಾರರ ಚೀಟಿಯನ್ನು ಪಡೆದುಕೊಳ್ಳಬೇಕು ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತಾರಾದ ರೂಪ, ಜಿ.ಪಂ.ನ ಉಪ ಕಾರ್ಯದರ್ಶಿಗಳಾದ ಕೃಷ್ಣಂ ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಸವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ ಹರೀಶ್ ರವರನ್ನು ಒಳಗೊಂಡಂತೆ ತೃತೀಯ ಲಿಂಗಿ ಸ್ವಯಂ ಸೇವಾ ಸಂಸ್ಥೆಗಳಾದ ಆಶೋದಯ ಆಶ್ರಯ ಹಾಗೂ ಸೆವೆನ್ ರೈನ್ಬೋನ ತೃತೀಯ ಲಿಂಗಿಗಳು ಉಪಸ್ಥಿತರಿದ್ದರು.

 

.

Leave a Reply

Your email address will not be published. Required fields are marked *