ಮಾ.12 ,13 ರಂದು ಒಂಟಿಕೊಪ್ಪಲು ಗ್ರಾಮದೇವತೆ ಹಬ್ಬದ ಪ್ರಯುಕ್ತ ಶ್ರೀ ಶಿವಣ್ಣ ಸ್ಮಾರಕ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ

ನಂದಿನಿ ಮೈಸೂರು

ಒಂಟಿಕೊಪ್ಪಲು ಗ್ರಾಮದೇವತೆ ಹಬ್ಬದ ಪ್ರಯುಕ್ತ ಶ್ರೀ ಶಿವಣ್ಣ ಸ್ಮಾರಕ ಮೈಸೂರು ವಿಭಾಗ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು‌.

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಮಾರ್ಚ್ 12 ಹಾಗೂ 13 ರಂದು ಮೈಸೂರು ನಗರದ ಒಂಟಿಕೊಪ್ಪಲಿನಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿದೆ.ಸುಮಾರು ಮೂವತ್ತು ವರ್ಷದಿಂದ ಕಬ್ಬಡಿ ಪಂದ್ಯಾವಳಿಯನ್ನು ನಡೆಸುತ್ತಾ ಬರುತ್ತಿದ್ದೇವೆ, ಅದೇ ರೀತಿ ಈ ವರ್ಷವೂ ಸಹಾ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಬಿಜೆಪಿ ಮುಖಂಡ ಜಯಪ್ರಕಾಶ್ ನೇತೃತ್ವದಲ್ಲಿ ಏರ್ಪಡಿಸಲಾಗಿದೆ.ಸುಮಾರು 30 ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು ಅವರು ಉಳಿದುಕೊಳ್ಳಲು ಹಾಗೂ ಊಟೋಪಾಚಾರ ವ್ಯವಸ್ಥೆ ಮಾಡಲಾಗಿದೆ. ಗೆದ್ದ ತಂಡಗಳಿಗೆ ಮೊದಲ ಬಹುಮಾನ 30
ಆಕರ್ಷಕ ಟ್ರೋಫಿ,ಎರಡನೇ ಬಹುಮಾನ 15 ಸಾವಿರ,ಮೂರನೇ ಬಹುಮಾನ 10 ಸಾವಿರ ಹಾಗೂ ಎರಡು ಬಹುಮಾನ ವಿತರಿಸಲಿದ್ದೇವೆ.1 ಸಾವಿರ ರೂ ಪಾವತಿಸಿ ತಂಡವನ್ನು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ
ಗುರುರಾಜ್,ಪ್ರಸನ್ನ ಕುಮಾರ್,ಹೇಮಂತ್ ಹಾಜರಿದ್ದರು.

 

Leave a Reply

Your email address will not be published. Required fields are marked *