ರೈತ ಫಲಾನುಭವಿಗಳಿಗೆ ಪವರ್ ಟಿಲ್ಲರ್ , ಪವರ್ ವೀಡರ್ ಯಂತ್ರ ವಿತರಿಸಿದ ಶಾಸಕ ಎಂ.ಅಶ್ವಿನ್ ಕುಮಾರ್

ಮಾಧು / ನಂದಿನಿ ಮೈಸೂರು

*ತಿ.ನರಸೀಪುರ* :ಕೃಷಿ ಯಾಂತ್ರೀಕರಣ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ರೈತ ಫಲಾನುಭವಿಗಳಿಗೆ ನೀಡಲಾಗುವ ಪವರ್ ಟಿಲ್ಲರ್ ಹಾಗು ಪವರ್ ವೀಡರ್ ಯಂತ್ರಗಳನ್ನು ಶಾಸಕ ಎಂ.ಅಶ್ವಿನ್ ಕುಮಾರ್  ವಿತರಿಸಿದರು.

ತಿ.ನರಸೀಪುರ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಪವರ್ ಟಿಲ್ಲರ್ ವಿತರಣೆ ಕಾರ್ಯಕ್ರಮದಲ್ಲಿ ಪ.ಜಾತಿ,ಪ.ಪಂ ಹಾಗು ಸಾಮಾನ್ಯ ವರ್ಗದ 07 ಮಂದಿ ಫಲಾನುಭವಿಗಳಿಗೆ 2,04,500 ರೂ.ಮುಖಬೆಲೆಯ ಪವರ್ ಟಿಲ್ಲರ್ ಗಳನ್ನು ಸಬ್ಸಿಡಿ ದರದಲ್ಲಿ ವಿತರಣೆ ಮಾಡಿ ಮಾತನಾಡಿದ ಶಾಸಕರು ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಬಳಕೆಗೆ ಬೇಕಾದ ಪವರ್ ಟಿಲ್ಲರ್ ಹಾಗು ಪವರ್ ವೀಡರ್ ಯಂತ್ರಗಳನ್ನು ಕೃಷಿ ಇಲಾಖೆ ನೀಡುತ್ತಿದೆ.ಯಂತ್ರಗಳನ್ನು ಪಡೆದುಕೊಂಡ ರೈತರು ಕೃಷಿ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಮಾಡುವ ಮೂಲಕ ಇಲಾಖೆಯ ಯೋಜನೆಯ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು.ಪವರ್ ಟಿಲ್ಲರ್ ಗೆ ಜೋಡಿಸಲು ಬೇಕಾದ ಮತ್ತಿತರೆ ಸಲಕರಣೆಗಳನ್ನು ಸಹ ಕೃಷಿ ಇಲಾಖೆ ನೀಡುತ್ತದೆ,ಇದರೊಂದಿಗೆ ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಪವರ್ ಟಿಲ್ಲರ್ ಯಂತ್ರಗಳನ್ನು ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು,ಆನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು‌ ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಸುಹಾಸಿನಿ‌ ಮಾತನಾಡಿ ಇಲಾಖೆಯು ರೈತರಿಗೆ ನೀಡುತ್ತಿರುವ ಪವರ್ ಟಿಲ್ಲರ್ ನಪೂರ್ಣದರ 2,04,500 ರೂ.ಗಳಾಗಿದ್ದು,ಪ.ಜಾತಿ ಮತ್ತು ವರ್ಗದ ಫಲಾನುಭವಿ ರೈತರು ಇಲಾಖೆಗೆ 1,04,500 ರೂ.ಗಳನ್ನು ಪಾವತಿಸಿದರೆ,1 ಲಕ್ಷ ರೂ.ಗಳ ಸಹಾಯಧನ ದೊರೆಯಲಿದೆ,ಸಾಮಾನ್ಯ ವರ್ಗದ ರೈತರು 1,22,000 ರೂ.ಗಳನ್ನು ಪಾವತಿಸಿದರೆ ಅವರಿಗೆ 82,000 ರೂ.ಗಳ ಸಹಾಯ ಧನ ದೊರಕಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ಶಿವಣ್ಣ,ಸಹಾಯಕ ಕೃಷಿ ಅಧಿಕಾರಿ ಶಿವರಾಜ್,ತಾಂತ್ರಿಕ ಅಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ವಿಶಾಲ್,ಜಯಲಕ್ಷ್ಮಿ, ಕ್ಷೇತ್ರ ಜೆಡಿಎಸ್ ಅಧ್ಯಕ್ಷ ಚಿನ್ನಸ್ವಾಮಿ,ಜಿ.ಪಂ.ಮಾಜಿ ಸದಸ್ಯ ಜೈಪಾಲ್ ಭರಣಿ,ಶಂಭುದೇವನಪುರ ರಮೇಶ್, ಮಾವಿನಹಳ್ಳಿ ರಾಜೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *