ಮೈಸೂರಿನಲ್ಲಿ ಜಸ್ಟ್ ಪಾಸ್ ಚಿತ್ರದ ಚಿತ್ರೀಕರಣ

ನಂದಿನಿ ಮೈಸೂರು

ರಾಯ್ಸ್ ಎಂಟರ್ಟೈನ್ಮೆಂಟ್ ರವರ ಬ್ಯಾನರ್ ನಡಿ ನಿರ್ಮಾಣ ವಾಗುತ್ತಿರುವ ಶಶಿಧರ್ ರವರ ಚೊಚ್ಚಲ ಚಿತ್ರ ಜಸ್ಟ್ ಪಾಸ್ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ.

ಮೈಸೂರಿನ ನಂಜರಾಜ್ ಬಹದ್ದೂರ್ ಛತ್ರದಲ್ಲಿ ಜಸ್ಟ್ ಪಾಸ್ ಚಿತ್ರ ತಂಡ ನ್ಯಾಯಾಲಯದಲ್ಲಿ ಒಂದು ಪ್ರಕರಣದ ತೀರ್ಪಿನ ಚಿತ್ರೀಕರಣದಲ್ಲಿ ಬ್ಯೂಸಿಯಗಿದ್ದರು.


ಚಿತ್ರೀಕರಣ ನಡೆಸುತ್ತಿರುವ ವೇಳೆ ಸುದ್ದಿ ಗೋಷ್ಟಿ ನಡೆಸಿದ ಚಿತ್ರ ತಂಡ ಚಿತ್ರದ ಕುರಿತು ಮಾಹಿತಿ ನೀಡಿದರು.

ತರ್ಲೆ ವಿಲೇಜ್ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ.ಎಂ.ರಘು ಮಾತನಾಡಿ ಮೈಸೂರಿನ ಚಿತ್ರನಿರ್ಮಾಪಕ ಕೆ.ವಿ.ಶಶಿಧರ್ ನಿರ್ಮಾಣದ ಚೊಚ್ಚಲ ಚಿತ್ರ ಜಸ್ಟ್ ಪಾಸ್ ಚಿತ್ರ ಮೈಸೂರಿನ ಸುತ್ತ ಮುತ್ತ ಚಿತ್ರೀಕರಣ ಮಾಡುತ್ತಿದ್ದೇವೆ ಕಳೆದ ಎಂಟು ದಿನದಿಂದ ಚಿತ್ರೀಕರಣ ಸಾಗುತ್ತಿದೆ.
ಇಂದು ನ್ಯಾಯಾಲಯ ಸಂಭಂದ ದೃಶ್ಯ ಚಿತ್ರೀಕರಣ ನಡೀತಿದೆ. ಜಸ್ಟ್ ಪಾಸ್ ಆದವರಿಗೆ ಮಾತ್ರ ಜೀವನದಲ್ಲಿ ತರಬೇತಿ ಕಾಲೇಜು ಈ ರೀತಿ ಚಿತ್ರದ ಕಥೆ ಸಾಗುತ್ತದೆ. ಆಗಸ್ಟ್ ಅಂತ್ಯದಲ್ಲಿ ತೆರೆಮೇಲೆ ಬರಲಿದೆ ಎಂದು ಭರವಸೆ ನೀಡಿದರು.

ಚಿತ್ರದ ನಟ ಶ್ರೀ, ನಟಿ ಪ್ರಣತಿ,
ಸಾಧುಕೋಕಿಲ,ರಂಗಾಯಣ ರಘು ಸೇರಿದಂತೆ ಕಲಾವಿದರು ಅವರವರ ಪಾತ್ರದ ಬಗ್ಗೆ ಪರಿಚಯ ಮಾಡಿಕೊಂಡರು.

Leave a Reply

Your email address will not be published. Required fields are marked *