ಮನೆಯ ಡಿಜಿಟಲ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ, ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಟಿ.ನರಸೀಪುರ ಪೋಲೀಸರು ಯಶಸ್ವಿ

ನಂದಿನಿ ಮೈಸೂರು

ಮನೆಯ ಡಿಜಿಟಲ್ ಲಾಕರ್‌ನಲ್ಲಿಟ್ಟಿದ್ದ ವಿವಿಧ ಮಾದರಿಯ ಚಿನ್ನಾಭರಣ ಹಾಗೂ ಲಕ್ಷಾಂತರ ರೂಪಾಯಿ ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಟಿ.ನರಸೀಪುರ ಪೋಲೀಸರು ಯಶಸ್ವಿಯಾಗಿದ್ದಾರೆ .

ಟಿ.ನರಸೀಪುರ ಟೌನ್‌ನಲ್ಲಿರುವ ಶ್ರೀನಿಧಿ ಡಿಸ್ಟಿಬ್ಯೂಟರ್ ಮಾಲೀಕರಾದ ಶ್ರೀನಿವಾಸ್‌ ಎಂಬುವವರು 21.08.2022
ಟಿ.ನರಸೀಪುರ ಪೊಲೀಸ್ ಠಾಣೆಗೆ ತೆರಳಿ
ತನ್ನ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯ ಡಿಜಿಟಲ್ ಲಾಕರ್‌ನಲ್ಲಿಟ್ಟಿದ್ದ ಸುಮಾರು 3 ಕೆ.ಜಿ. 250 ಗ್ರಾಂ ವಿವಿಧ ಮಾದರಿಯ ಚಿನ್ನದ ಒಡವೆಗಳು, 12 ಕೆ.ಜಿ ಬೆಳ್ಳಿಗಟ್ಟಿ ಹಾಗೂ 30 ಲಕ್ಷ ರೂಪಾಯಿ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದೂರು ದಾಖಲಿಸಿದ್ದರು.

ಪ್ರಕರಣದ ಪತ್ತೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೀಮಾ ಲಾಟ್ಕರ್ ಐಪಿಎಸ್ ರವರ ನಿರ್ದೇಶದನದಂತೆ, ಡಾ.ನಂದಿನಿ ಅವರ ಪೊಲೀಸ್ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ ಗೋವಿಂದರಾಜು ಡಿ.ಎಸ್.ಪಿ. ನಂಜನಗೂಡು, ಉಪವಿಭಾಗ ರವರ ನೇತೃತ್ವದಲ್ಲಿ, ಶ್ರೀಕಾಂತ್, ಪಿ.ಐ, ಸಾಲಿಗ್ರಾಮ ಠಾಣೆ, ಲಕ್ಷ್ಮೀಕಾಂತ್.ಕೆ.ತಳವಾರ್ ಸಿಪಿಐ ನಂಜನಗೂಡು ಪಟ್ಟಣ ವೃತ್ತ, ಮಹೇಶ್ ಕುಮಾರ್, ಪಿ.ಎಸ್.ಐ(ಪ್ರೈ), ಟಿ ನರಸೀಪುರ ಪೊಲೀಸ್ ಠಾಣೆ, ಜಯಪ್ರಕಾಶ್ ಪಿ.ಎಸ್.ಐ ಅಂತರಸಂತೆ ಪೊಲೀಸ್ ಠಾಣೆ ರವರನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು.

ಮಹೇಶ್ ಕುಮಾರ್, ಪಿ.ಎಸ್.ಐ(ಕೈ), ಟಿ ನರಸೀಮರ ಪೊಲೀಸ್ ಠಾಣೆ ರವರ ತಂಡವು ಆಂಧ್ರಪ್ರದೇಶದ ಹಿಂದುಪುರ, ಬತ್ತಲಪಲ್ಲಿ, ಪೆನುಕೊಂಡ, ಪುಟ್ಟಪರ್ತಿ, ಪರಿಗಿ, ಧರ್ಮಾವರಂ, ಅನಂತಮರ, ಹೈದರಾಬಾದ್ ಕಡೆಗಳಲ್ಲಿ ಮಾಹಿತಿ ಕಲೆಹಾಕಿ, ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆರೋಪಿಯು ತಾನು ಹಾಸನ ಜೈಲಿನಲ್ಲಿರುವ ಆರೋಪಿಯೊಂದಿಗೆ ಹಾಗೂ ತನ್ನ ಇನ್ನಿಬ್ಬರು ಸಹಚರರೊಂದಿಗೆ ಟಿ.ನರಸೀಪುರ ಟೌನ್‌ಗೆ ಬಂದು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಮುಂದಿನ ಕಾನೂನು ಕ್ರಮದಂತೆ ಆರೋಪಿಯಿಂದ 791 ಗ್ರಾಂ ಚಿನ್ನ ಮತ್ತು 499 ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿರುತ್ತದೆ.

ಈ ಕಳ್ಳತನದ ಆರೋಪಿಗಳ ತಂಡವು ಗದಗ ಜಿಲ್ಲೆ, ಬೈಲಹೊಂಗಲಗಳಲ್ಲೂ ಕಳ್ಳತನ ಮಾಡಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದ್ದು, ಟಿ.ನರಸೀಪುರದ ಎರಡು ಪ್ರಕರಣಗಳು, ಗದಗ ಜಿಲ್ಲೆಯ ಒಂದು ಪ್ರಕರಣ, ಬೈಲಹೊಂಗಲದಲ್ಲಿ ಒಂದು ಪ್ರಕರಣ, ನಿಪ್ಪಾಣಿಯ ಒಂದು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಐದು ಪ್ರಕರಣಗಳಲ್ಲಿ ಮೇಲ್ಕಂಡ ಆರೋಪಿಗಳು ಭಾಗಿಯಾಗಿರುವುದು ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ಮಾಡಬೇಕಾಗಿರುತ್ತದೆ. ಆರೋಪಿಗಳ ಪೈಕಿ ಒಬ್ಬ ಹಾಸನ ಜಿಲ್ಲೆಯ ಜೈಲಿನಲ್ಲಿದ್ದು, ಉಳಿದ ಇಬ್ಬರು ಆರೋಪಿಗಳು ಮರೆಸಿಕೊಂಡಿರುವುದಾಗಿ ತಿಳಿದು ಬಂದಿರುತ್ತದೆ.

ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಗೋವಿಂದರಾಜು ಬಿ.ಎಸ್‌.ಪಿ, ನಂಜನಗೂಡು ಉಪವಿಭಾಗ, ಶ್ರೀಕಾಂತ್, ಒಂದು ಸಾಲಿಗೆ ಭಾಗ, ಲಕ್ಷ್ಮೀತ್ ಗೆ ತಳವಾರ್, ಸಿಪಿಐ ನಂಜನಗೂಡು ಪಟ್ಟಣ ವೃತ್ತ – ಮಹೇಶ್ ಕುಮಾರ್, ಪಿ.ಎಸ್.ಎಂ), ಜಯಪ್ರಕಾಶ್ ಪಿ.ಎಸ್.ಐ ಅಂತರಸಂತೆ: ಪೊಲೀಸ್ ಠಾಣೆ, ಆರತಿ ಮೊಬೆಷನರಿ ಪಿ.ಎಸ್.ಐ ರವರುಗಳು, ಸತೀಶ ಎ.ಎಸ್‌.ಐ. ಪೊಲೀಸ್ ಸಿಬ್ಬಂದಿಗಳಾದ ಭಾಸ್ಕರ್ ಅಶೋಕ, ವಸಂತಕುಮಾರ್, ಜಯಮಾಡಿ, ಅಶ್ವಿಕಾ ರವರುಗಳ ಕಾರ್ಯವನ್ನು ಸೀಮಾ ಲಾಟ್ಕರ್ ಪೊಲೀಸ್ ಅಧೀಕ್ಷಕರು ಮೈಸೂರು ಜಿಲ್ಲೆ ರವರು ಪ್ರಶಂಸಿಸಿ, ಬಹುಮಾನ ಘೋಷಿಸಿರುತ್ತಾರೆ.

Leave a Reply

Your email address will not be published. Required fields are marked *