ದಿ.25 ರಿಂದ 29ರವರಿಗೆ ನಡೆಯಲಿರುವ “ ವಾಲಿಬಾಲ್ ಸಂಭ್ರಮ” ಪೋಸ್ಟರ್ ಬಿಡುಗಡೆ

ನಂದಿನಿ ಮೈಸೂರು

ದಿ.25 ರಿಂದ 29ರವರಿಗೆ ಮೈಸೂರು ವಿಶ್ವವಿದ್ಯಾನಿಲಯ ಕ್ರೀಡಾ ಮೈದಾನದಲ್ಲಿ (ಸ್ಪೋರ್ಟ್ಸ್ ಪವಿಲಿಯನ್) ನಡೆಯಲಿರುವ “ ವಾಲಿಬಾಲ್ ಸಂಭ್ರಮ” ಎಂಬ ಪೋಸ್ಟರನ್ನು ಬಿಡುಗಡೆ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಟಿ ಶಿವಪ್ರಕಾಶ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಮೈಸೂರು ಜಿಲ್ಲಾ ವಾಲಿಬಾಲ್ ಸಂಸ್ಥೆ ವತಿಯಿಂದ ವಾಲಿಬಾಲ್ ಸಂಭ್ರಮ 25ನೇ ಕರ್ನಾಟಕ ರಾಜ್ಯ ಮಟ್ಟದ ಅಂತರ ಜಿಲ್ಲಾ ವಾಲಿಬಾಲ್ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ.ಮೈಸೂರಿನಲ್ಲಿ ಪ್ರಥಮಬಾರಿಗೆ ಪುರುಷರ ಮತ್ತು ಮಹಿಳೆಯರ ಕರ್ನಾಟಕ ರಾಜ್ಯ ಮಟ್ಟದ ಅಂತರ ಜಿಲ್ಲಾ ಹೊನಲು ಬೆಳಕಿನ ವಾಲಿಬಾಲ್ ಚಾಂಪಿಯನ್‌ಶಿಪ್‌ ಅನ್ನು ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಮೈಸೂರು ಜಿಲ್ಲಾ ವಾಲಿಬಾಲ್ ಸಂಸ್ಥೆಯಿಂದ ಆಯೋಜಿಸಲಾಗಿದೆ.

ಈ ಕ್ರೀಡಾಕೂಟಕ್ಕೆ ಸುಮಾರು 31) ಜಿಲ್ಲೆಯಿಂದ ಪುರುಷರ ತಂಡಗಳು 20 ಜಿಲ್ಲೆಯಿಂದ ಮಹಿಳೆಯರ ತಂಡಗಳು, ಒಟ್ಟು ಸುಮಾರು 700 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಭಾಗವಹಿಸುವ ಆಟಗಾರರಿಗೆ, ತರಬೇತುದಾರರಿಗೆ ತೀರ್ಪುಗಾರರಿಗೆ ಹಾಗೂ ಅಧಿಕಾರಿಗಳಿಗೆ ಆಹಾರ, ವಸತಿ ಮತ್ತು ಆತಿಥ್ಯದ ವ್ಯವಸ್ಥೆಯನ್ನು ಮಾಡಲಾಗುವುದು ಮತ್ತು ಪ್ರಥಮ ದ್ವಿತೀಯ ತೃತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವಂತಹ ತಂಡಗಳಿಗೆ ಬಹುಮಾನಗಳನ್ನು ನೀಡಲಾಗುವುದು ಎಂದರು.

ಜಿಲ್ಲಾ ವಾಲಿಬಾಲ್ ಸಂಸ್ಥೆಯ ಕಾರ್ಯಕಾರಿಣಿ ಅಧ್ಯಕ್ಷರಾದ ಪ್ರೊಫೆಸರ್ ಚಂದ್ರಕುಮಾರ್ ಮಾತನಾಡಿ ಈ ಚಾಂಪಿಯನ್‌ ಶಿಪ್‌ ನಲ್ಲಿ ಕರ್ನಾಟಕ ರಾಜ್ಯ ವಾಲಿಬಾಲ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದು, ಮುಂಬರುವ 69ನೇ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ಯ ಪುರುಷರ ಹಾಗೂ ಮಹಿಳೆಯರ ತಂಡವನ್ನು ಆಯ್ಕೆ ಮಾಡಲಾಗುವುದು ಮತ್ತು 21ನೇ ತಾರೀಖಿನ ನಂತರ ಪಂದ್ಯಾಟಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷರಾದ ಅರುಣ್ ಕುಮಾರ್ ರವರು, ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಚಾಂಪಿಯನ್‌ಶಿಪ್ ಯಶಸ್ವಿಗೊಳಿಸುವಂತೆ ಮೈಸೂರಿನ ಜನತೆಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಕಾರಿಣಿ ಅಧ್ಯಕ್ಷರಾದ ಪ್ರೊಫೆಸರ್ ಚಂದ್ರಕುಮಾರ್, ಉಪಾಧ್ಯಕ್ಷರಾದ ಶ್ರೀ ಅರುಣ್ ಕುಮಾರ್ , ಕಾರ್ಯದರ್ಶಿಯಾದ ಗಿರೀಶ್ ಎಸ್ ಹಾಗೂ ಎಲ್ಲಾ ವಾಲಿಬಾಲ್ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9482235975ಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *