ಮೈಸೂರು:5 ಮೇ 2022
ನಂದಿನಿ ಮೈಸೂರು
ರೈತ ಎಂಬ ಶಿರ್ಷಿಕೆ ಅಡಿಯಲ್ಲಿ ಫ್ಯಾಷನ್ ಶೋ ನಡೆದಿದ್ದು ತಿಬ್ಬಾಸ್ ಗ್ರೂಪ್ ನ 10 ಸ್ಪರ್ಧಿಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಎಂದು ಫ್ಯಾಶನ್ ಮಾಡೆಲ್ ನಾಗೇಶ್ ಡಿ.ಸಿ ತಿಳಿಸಿದರು.
ತಿಬ್ಬಾಸ್ ಗ್ರೂಪ್ ಮಾಡಲಿಂಗ್ ಕಂಪನಿ ವತಿಯಿಂದ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ
Thibbas future model of India son – 2 Grand Finale ಕಾರ್ಯಕ್ರಮ ಮೇ 1 ರಂದು ಜರುಗಿತ್ತು.ಈ ಸ್ಪರ್ಧೆಯಲ್ಲಿ 16 ವಿಭಾಗಗಳನ್ನು ಪರಿಚಯಿಸಲಾಯಿತು.ಫ್ಯಾಷನ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ವಿಭಾಗಗಳನ್ನು ಪರಿಚಯಿಸಿದ್ದಾರೆ. ತಿಬ್ಬಾಸ್ ಗ್ರೂಪ್ ಮಾಡೆಲಿಂಗ್ ಕಂಪನಿಗೆ ಈ ಹೆಮ್ಮೆ ಸಲ್ಲುತ್ತದೆ . ಈ ಸಂಸ್ಥೆಯು 2018 ರಲ್ಲಿ ಪ್ರಾರಂಭಿಸಲಾಯಿತು . ಮೊದಲ ಬಾರಿಗೆ 1 ವರ್ಷದಿಂದ 80 ವರ್ಷದ ವಯೋಮಿತಿಯವರು )
ಮಾಡೆಲಿಂಗ್ ಯನ್ನು ಏರ್ಪಡಿಸಿದ ಮೊದಲ ಸಂಸ್ಥೆಯಾಗಿದೆ .ಈ ಸ್ಪರ್ಧೆಯಲ್ಲಿ ರೈತರ ವೇಶಭೂಷಣ ತೊಟ್ಟು ಅವರ ಬಗ್ಗೆ ಮಾತನಾಡುವುದು ಈ ಸ್ಪರ್ದೇಯ ವಿಶೇಷವಾಗಿತ್ತು ಎಂದರು.
ನಂತರ ಸ್ಪರ್ಧೆಯ ವಿಜೇತರರು ತಮ್ಮ ಅನುಭವವನ್ನು ಹಂಚಿಕೊಂಡರು.