ಎಪಿಎಂಸಿ ಏಜೆಂಟ್ ದಪ್ಪ ಮೆಣಸಿನಕಾಯಿ‌ ರವಿ ಬರ್ಬರ ಹತ್ಯೆ

ಮೈಸೂರು:4 ಮೇ 2022

ನಂದಿನಿ ಮೈಸೂರು

ಮೈಸೂರಿನ ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಏಜೆಂಟ್‌ ಎಂ.ಜೆ.ರವಿ (35) ಅವರನ್ನು ಮಂಗಳವಾರ ಸಂಜೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಎಪಿಎಂಸಿ ಮಳಿಗೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಈ ದುಷ್ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.  
ಮೂಲತಃ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ನಿವಾಸಿಯಾದ ಎಂ.ಜೆ.ರವಿ ಉತ್ತನಹಳ್ಳಿಯಲ್ಲಿ ವಾಸವಾಗಿದ್ದರು.

ಮೃತರಿಗೆ ತಂದೆ-ತಾಯಿ, ಪತ್ನಿ, ಮೂವರು ಮಕ್ಕಳು, ಸಹೋದರಿ ಇದ್ದಾರೆ.
ಎಎಸ್‌ಪಿ ಶಿವಕುಮಾರ್‌ ಆರ್‌.ದಂಡಿನ, ದಕ್ಷಿಣ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌, ಸಿಬ್ಬಂದಿ ಸ್ಥಳ ಮಹಜರು ನಡೆಸಿದರು.

Leave a Reply

Your email address will not be published. Required fields are marked *