ಮೇ 9 ರಂದು ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ Indian Musicology Day ಗ್ರಂಥಲೋಕಾರ್ಪಣೆ, ಕಲೋತ್ಸವ ಉದ್ಘಾಟನೆ ಕಾರ್ಯಕ್ರಮ

123 Views

ಮೈಸೂರು:5 ಮೇ 2022

ನಂದಿನಿ ಮೈಸೂರು

ಬ್ರಹ್ಮವಿದ್ಯಾ ಮೈಸೂರು,
ರಸಋಷಿ ಸಂಶೋಧನಾ ಕೇಂದ್ರ , ವೀಣಾ ವಿಶ್ವೇಶ್ವರನ್ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸಮರ್ಪಿಸುವ ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ Indian Musicology Day ಗ್ರಂಥಲೋಕಾರ್ಪಣೆ ಮತ್ತು ಕಲೋತ್ಸವಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕಲಾಶ್ರೀ ಡಾ.ರಾ.ಸ. ನಂದಕುಮಾರ್ ತಿಳಿಸಿದರು.

ಶ್ರೀವಾಸುದೇವಾಚಾರ ಭವನದಲ್ಲಿ
ಮೇ 9 , 10 ಮತ್ತು 11 ರಂದು ಮಹಾರಾಜ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ. ಡಾ.ವಿಜಯ್ ಶಂಕರ್ ಶುಕ್ಲಾ ರವರಿಗೆ ಶಾಸ್ತ್ರಸೂರೀ ಪ್ರಶಸ್ತಿ ಪುರಸ್ಕಾರ, ವಸಂತಮಾಧವಿ ,ಡಾ.ಲಲಿತಾ ಶ್ರೀನಿವಾಸ್, ಡಾ.ಶ್ರೀಕಾಂತಂ ನಾಗೇಂದ್ರಶಾಸ್ತ್ರಿ,ಡಾ.ಎಸ್.ಆರ್,ನರಸಿಂಹಮೂರ್ತಿ ರವರಿಗೆ ಸಂಸ್ಮರಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಸಂಜೆ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುಬ್ರಹ್ಮಣ್ಯ, ಕೌಸ್ತುಭಾ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *