ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೇಸ್ ಮೇಲುಗೈ ಕೈ ಹಿಡಿದ ರಾಜ್ಯದ ಜನತೆಗೆ ಕೃತಜ್ಞತೆ:ಎ.ಜಿ.ಮುತಾಹಿರ್ ಪಾಷ

ಮೈಸೂರು :1 ಜನವರಿ 2022

ನಂದಿನಿ

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಬಹುತೇಕ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ಡಿಸಿಸಿ ಜನರಲ್ ಸೆಕರೇಟರಿ ಎ.ಜಿ ಮುತಾಹಿರ್ ಪಾಷ ಹರ್ಷ ವ್ಯಕ್ತಪಡಿಸಿದರು.

ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳು ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅದರಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ.ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದಿರುವ ಮತದಾರ ಕೋಮುವಾದಿ ಪಕ್ಷ ಬಿಜೆಪಿ ಕೈ ಬಿಟ್ಟಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಬ್ಬರು ಸಿಎಂ ಬದಲಾವಣೆ ಆದರು.ಮತ್ತೆ ಸಿಎಂ ಬದಲಾಗುತ್ತಾರೆ ಎಂಬ ಮಾತು‌ ಕೇಳಿಬರುತ್ತಿದೆ.ಇದೆ ಬಿಜೆಪಿ ಸಾಧನೆ.ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ರವರ 5 ವರ್ಷ ಉತ್ತಮ ಆಡಳಿತ ನಡೆಸಿದ್ದಾರೆ.ಡಿ.ಕೆ.ಶಿವಕುಮಾ
ರ್ ತನ್ವೀರ್ ಸೇಠ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು‌ ಕಾರ್ಯಕರ್ತರ ಸಂಘಟನೆ ಮಾಡುತ್ತಿದ್ದಾರೆ.ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಜ.3 ರಂದು ಕಾಂಗ್ರೆಸ್ ಪಕ್ಷದಿಂದ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದು ಚಾಮರಾಜನಗರದಿಂದ ಬೀದರ್ ವರಗೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವಂತೆ ಆಹ್ವಾನಿಸಿದರು.

Leave a Reply

Your email address will not be published. Required fields are marked *