ಸಪ್ತಪದಿ ಜೊತೆ ಸಾವಿನಲ್ಲೂ ಮಡದಿ ಕೈ ಹಿಡಿದು ಹೊರಟ ದುರಂತ ಅಪಘಾತ

ಮಂಡ್ಯ:2 ಜನವರಿ 2022

ನಂದಿನಿ ಮೈಸೂರು

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇನ್ನೂ ಒಂದು ತಿಂಗಳು ಕಳೆದಿಲ್ಲ.ನೂರು ವರ್ಷ ನಿನ್ನ ಕೈ ಬಿಡೋದಿಲ್ಲ ಎಂದು ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿದ್ದ.ನೆನ್ನೇ ಕೂಡ ಹೊಸ ವರ್ಷವನ್ನ ಹೊಸ ದಂಪತಿಗಳು ಸ್ವಾಗತಿಸಿದ್ರೂ,ಬೆಟ್ಟದಷ್ಟು ಆಸೆ ಇಟ್ಟುಕೊಂಡು ಕುಟುಂಬದ ಸಮೇತ ದೇವರ ದರ್ಶನ ಪಡೆಯೋಕೆ ತೆರಳಿದ್ರೂ ಆದರೇ ಯಮನಂತೆ ಬಂದ ಬಸ್ ನವ ದಂಪತಿ ಸೇರಿದಂತೆ ಹಿರಿಯ ಜೀವನನ್ನೂ ಬಲಿ ಪಡೆದಿದೆ.

ಬೆಳ್ಳೂರು ಕಡೆಗೆ ತೆರಳುತ್ತಿದ್ದ ಬಸ್ ಮೈಸೂರು ಕಡೆಗೆ ಹೊಗುತ್ತಿದ್ದ KA-09 M A 6477 ಕಾರು ನಡುವೆ ಡಿಕ್ಕಿಯಾಗಿ ಸುದೀಪ್, ಶ್ರೀಜಾ ಮತ್ತೊಬ್ಬ ಮಹಿಳೆ ಕಾರಿನಲ್ಲಿಯೇ ಉಸಿರು ಚೆಲ್ಲಿದ್ದಾರೆ.

ಸುದೀಪ್ ಹಾಗು ಶ್ರೀಜಾ ಇತ್ತೀಚೆಗೆ ವಿವಾಹವಾಗಿದ್ದರು.ನವ ಜೋಡಿಗಳು ಅಮಾವಾಸ್ಯೆ ಅಂಗವಾಗಿ ಶ್ರೀ ಆದಿಚುಂಚನಗಿರಿ ಕ್ಷೇತ್ರಕ್ಕೆ ಕುಟುಂಬದ ಜೊತೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ಸು ಬರುವಾಗ ಅಪಘಾತವಾಗಿದೆ.ಡಿಸೆಂಬರ್ 10 ರಂದು ಸೋಮವಾರ ಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿತ್ತು.
ಹುಡುಗಿ ಕುಶಾಲನಗರದ ನಿವೃತ್ತ ಶಿಕ್ಷಕಿ ವಜ್ರರವರ ಮಗಳು. ಹುಡುಗ ಕುಂದಳ್ಳಿಯವರಾಗಿ ಬೆಂಗಳೂರಿನಲ್ಲಿ ನೆಲಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದರು. ಕಾರಿನಲ್ಲಿದ್ದ ಓರ್ವ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸಂಬಂಧ ನಾಗಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನನ್ನ ಜೀವ ಇರೋವರೆಗೂ ನಿನ್ನ ಕೈ ಬಿಡೋದಿಲ್ಲ ಎಂದವ ತನ್ನ ಸಾವಿನಲ್ಲೂ ಮಡದಿಯನ್ನ ಕೈ ಬಿಡದಂತೆ ತನ್ನ ಜೊತೆಯೇ ಕೈ ಹಿಡಿದು ಕರೆದೊಯ್ದೀದ್ದಾನೆ.

Leave a Reply

Your email address will not be published. Required fields are marked *