ಮೈಸೂರು:1 ಜನವರಿ 2022
ನಂದಿನಿ
ಮೈಸೂರು ಜಿಲ್ಲಾಡಳಿತ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಆಚರಣ ಸಮಿತಿ ಸಹಯೋಗದಲ್ಲಿ ಸಮಿತಿ ಅಧ್ಯಕ್ಷರಾದ ಆರ್. ಜಯಕುಮಾರ್ ನೇತೃತ್ವದಲ್ಲಿ ವಿಶ್ವಕರ್ಮ ಶ್ರೀ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಿಸಲಾಯಿತು.
ಕಲಾಮಂದಿರದಲ್ಲಿ ಶಾಸಕ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್,ಪಾಲಿಕೆ ಸದಸ್ಯ ರಮಣಿ ರಮೇಶ್,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೇರಿ ಗೋಪಾಲ್ ಸೇರಿದಂತೆ ಗಣ್ಯರು ಅಮರಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಇದೆ ವೇಳೆ ಪಿ.ಎಸ್ ಸಿದ್ದಾಚಾರ್ ರವರ ಅಮರ ಶಿಲ್ಪಿ ಐತಿಹ್ಯ ಕಥಾನಕ ಕೃತಿಯನ್ನು ಲೋಕಾರ್ಪಣೆ ಗೊಳಿಸಲಾಯಿತು, ಹಾಗೂ ವಿಶ್ವಕರ್ಮ ಸಮುದಾಯದ ಸಾಧನಗೈದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ,ಸಮಿತಿಯ ರಿಷಿ ಆಚಾರ್ , ಬಸವರಾಜು ಜಯಪುರ, ವಸಂತಕುಮಾರ್, ಸೋಮಸುಂದರ್ ಮೂರ್ತಿ , ಸುರೇಶ್ ಬಾಬು, ರಾಮಚಂದ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.