ಕರ್ನಾಟಕ ಸೇನಾ ಪಡೆಯ 2022 ನೂತನ ಕ್ಯಾಲೆಂಡರ್ ಬಿಡುಗಡೆ

ಮೈಸೂರು:1 ಜನವರಿ 2022

ನಂದಿನಿ

ಕರ್ನಾಟಕ ಸೇನಾ ಪಡೆಯ 2022 ನೇ ಇಸವಿಯ ನೂತನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಸೇನಾ ಪಡೆಯ 2022 ನೇ ಇಸವಿಯ ಹೊಸ ವರ್ಷದ ಕ್ಯಾಲೆಂಡರ್ ಅನ್ನು ದಕ್ಷಿಣ ಪದವೀಧರ ಕ್ಷೇತ್ರದ ಶಾಸಕರಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಿ ಮಾತನಾಡಿ ಭಗವಂತ ಈ ಹೊಸ ವರ್ಷದಲ್ಲಿ ಕೊರೊನಾ ವೈರಸ್ ದೇಶದಿಂದ ಬೇಗನೆ ಮಾಯವಾಗಿ, ಜನರು ಮತ್ತೆ ಆರೋಗ್ಯವಂತರಾಗಲಿ, ಎಂದಿನಂತೆ ಜನಜೀವನ ಚಟುವಟಿಕೆಗಳು ನಡೆಯಲಿ, ಮಳೆಬೆಳೆಯಾಗಲಿ, ಈ ಹೊಸ ವರ್ಷ ಜನರ ಮುಖದಲ್ಲಿ ಹೊಸ ಹರುಷವನ್ನು ತರಲಿ ಎಂದರು.

ಮಖ್ಯ ಅತಿಥಿ ಗಳಾಗಿ ಈ ಬಾರಿಯ ದಕ್ಷಿಣ ಪದವೀಧರರ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ಹೆಚ್. ಕೆ, ರಾಮು, ಮಾಜಿ ಮಹಾಪೌರರಾದ ಲಿಂಗಪ್ಪ, ಎಂಎನ್ ದೊರೆಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಜಯಣ್ಣ, ರಾಘವೇಂದ್ರ ಶೇಠ್, ಡಾ. ಲಕ್ಷ್ಮೀ ನಾರಾಯಣ ಶೆಣೈ, ಡಾ. ಶಾಂತರಾಜೇಅರಸ್, ವಿಜಯೇಂದ್ರ, ಪ್ರಭುಶಂಕರ್, ರಘುರಾಂ ಎಂ, ಮಂಜುನಾಥ್, ಶಿವರಾಮೇ ಗೌಡ, ಬಂಗಾರಪ್ಪ, ನಂದಕುಮಾರ್, ಸ್ವಾಮಿ, ಗಣೇಶ್ ಪ್ರಸಾದ್ ಇನ್ನೂ ಇತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *