ಶಿಕ್ಷಕರ ಮಾರ್ಗದಲ್ಲಿ ನಡೆದರೆ ಉನ್ನತ ಸ್ಥಾನ: ಕೆ ರಘುರಾಂ ವಾಜಪೇಯಿ

 

 

ಮೈಸೂರು:5 ಸೆಪ್ಟೆಂಬರ್ 2021

ಶಿಕ್ಷಕರಿಗೆ ಗೌರವ ಕೊಟ್ಟು ಅವರ ಮಾರ್ಗದರ್ಶನದಲ್ಲಿ ನಡೆದವರು ಜೀವನದಲ್ಲಿ ಉನ್ನತಿ ಹೊಂದುತ್ತಾರೆ ಎಂದು
ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ಅಭಿಪ್ರಾಯಪಟ್ಟರು.

ಕೃಷ್ಣರಾಜ ಯುವ ಬಳಗದ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ
ಹಿರಿಯ ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸಲಾಯಿತು

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ ಮಾಜಿ ರಾಷ್ಟ್ರಪತಿ ರಾಧಾಕೃಷ್ಣನ್‌ ಅವರ ಹುಟ್ಟುಹಬ್ಬ ಆಚರಣೆಗೆ ಮುಂದಾದಾಗ ಅವರು ತಮ್ಮ ಹುಟ್ಟುಹಬ್ಬ ಬೇಡ ಬದಲಿಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ಹಿರಿಯ ಶಿಕ್ಷಕರಾದ ಸುಗುಣವತಿ ,ಲೀಲಾ ಸತೀಶ್ ಚಂದ್ರ ,ಮಂಗಳಾ ಮುದ್ದುಮಾದಪ್ಪ ,ಗೌರಮ್ಮಣ್ಣಿ ,ಡಾ॥ಶೀಲಾಕುಮಾರಿ ,ಜಿ ಪುಷ್ಪಾವತಿ ಹಿರಿಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು

ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಗುರು ಎಂಬ ಶಕ್ತಿಯಿಂದ ಮಾತ್ರ ಜಗತ್ತು ನಡೆಯುತ್ತಿದೆ ಎಂದು ಮಾತನಾಡಿದರು.

ಶಾಲೆಯ ಕೊಣೆಗಳಲ್ಲಿ ದೇಶದ ಎಲ್ಲ ರೀತಿಯ ವ್ಯಕ್ತಿಗಳು ವಿಶೇಷಜ್ಞರು ಸೃಷ್ಟಿಗೊಳ್ಳುತ್ತಾರೆ ಇದಕ್ಕೆ ಕಾರಣವೇ ಗುರುಗಳು ಎಂದು ಅವರು ಹೇಳಿದರು.

ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಶಿಸ್ತು, ಸಮಯ ಪ್ರಜ್ಞೆ, ಮೈಗೂಡಿಸಿಕೊಂಡು ಶಾಲೆಯಲ್ಲಿರುವ ವಿದ್ಯಾರ್ಥಿಗಳ ಮನೋಸ್ಥಿತಿ ಅರಿತು ಬೋಧನೆ ಜೊತೆಗೆ ಅವರಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸಲು ಪ್ರಾಮಾಣಿಕ ಮಾಡಿ ,
ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಗೌರವವಿದೆ. ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ ಬದಲಾವಣೆಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಇದನ್ನು ಅರಿತುಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಕಡಕೊಳ ಜಗದೀಶ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ ,ಎಸ್ ಎನ್ ರಾಜೇಶ್ ,ಹರೀಶ್ ನಾಯ್ಡು,ಸೌಭಾಗ್ಯ ಮಂಜುನಾಥ್ ,ಹಾಗೂ ಇನ್ನಿತರರು ಹಾಜರಿದ್ದರು…

Leave a Reply

Your email address will not be published. Required fields are marked *