ಕೊಟ್ಯಾಂತರ ರೂಪಾಯಿ ಖರ್ಚು ಮಾಡಿದರು ನಿಲ್ಲದ ಆನೆಗಳ ಉಪಟಳ

ನಾಗರಹೊಳೆ:4 ಸೆಪ್ಟೆಂಬರ್ 2021

ದಾ ರಾ ಮಹೇಶ್ ಹನಗೋಡು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ಆನೆ ಕಾಟ ತಪ್ಪಿಸಲು ಸರ್ಕಾರ ಮೊದಲು ಆನೆ ಕಂದಕ ನಿರ್ಮಾಣ ಮಾಡಿದ್ದು ಅದಕ್ಕೆ ಆನೆಗಳು ಬುದ್ದಿವಂತ ಪ್ರಾಣಿ ಆದ್ದರಿಂದ ಕಂದಕಕ್ಕೆ ಮಣ್ಣು ತಳ್ಳಿ ಸಮತಟ್ಟು ಮಾಡಿಕೊಂಡು ಹೊರಗಡೆ ದಾಟಲು ಪ್ರಾರಂಭಿಸಿದವು.

ಅದು ಯೋಜನೆ ಪ್ರಯೋಜನ ಆಗದಿದ್ದಾಗ. ಕಂದಕದ ಪಕ್ಕದಲ್ಲಿ ಸೋಲಾರ್ ಬೇಲಿಯನ್ನು ಅಳವಡಿಸಿದರು ಆನೆಗಳು ಸೋಲಾರ್ ಬೇಲಿಗೆ ಒಣ ಮರಗಳನ್ನು ತಂದು ಅದರ ಮೇಲೆ ಹಾಕಿ ಬೇಲಿಯನ್ನು ಮುರಿದು ದಾಟಲು ಪ್ರಾರಂಭಿದವು. ಇದರಿಂದ ಅರಣ್ಯ ಇಲಾಖೆಗೆ ಅರಣ್ಯ ಪಕ್ಕದ ರೈತರು ಆನೆ ಕಾಟ ತಪ್ಪಿಸಲು ಮತ್ತಷ್ಟು ಒತ್ತಡ ಹೆಚ್ಚಾಯಿತು. ಹೊಸ ಯೋಜನೆಗಳನ್ನು ಹುಡುಕಲು ಇಲಾಖೆ ಪ್ರಾರಂಭಿಸಿತು.ಆಗ ಸರ್ಕಾರ ಆಫ್ರಿಕಾ ಮಾದರಿಯಲ್ಲಿ ರೈಲ್ವೆ ಕಂಬಿಗಳ ಬೇಲಿಯನ್ನು ಮಾಡಲು ಸಲಹೆ ನೀಡಿತು.

ಅದರಂತೆ ಆಫ್ರಿಕಾಕ್ಕೆ ನುರಿತ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿ ಅದರ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳ ಸುತ್ತ ಕೊಟ್ಯಾಂತರ ರೂಪಾಯಿ ಹಣವನ್ನು ಬಜೆಟ್ ನಲ್ಲಿ ಘೋಷಿಸಿ ಕಾಮಗಾರಿ ಪ್ರಾರಂಭಿಸಿ ರೈಲ್ವೆ ಕಂಬಿಗಳ ಬೇಲಿಯನ್ನು ಮಾಡಿದರು ಇದರಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸುತ್ತಲಿನ ರೈತರುಗಳು ನೆಮ್ಮದಿಯಾಗಿ ರಾತ್ರಿ ಸಮಯದಲ್ಲಿ ಒಂದೆರಡು ವರ್ಷ ನಿದ್ರೆ ಮಾಡಿದರು ಎರಡು ವರ್ಷ ಕಳೆದ ನಂತರ ಆನೆಗಳು ರೈಲ್ವೆ ಕಂಬಿಗಳ ಬೇಲಿಯನ್ನು ದಾಟಲು ಪ್ರಾರಂಭಿಸಿದೆವು ಅದರ ನಂತರದಲ್ಲಿ ಅರಣ್ಯ ಇಲಾಖೆ ಟೆಂಟ್ ಕಲ್ ಅಂದರೆ ( ರೈಲ್ವೆ ಕಂಬಿಗಳ ಬೇಲಿಯ ಮೇಲೆ ಆನೆಗಳು ನೆಗೆಯದಂತೆ ಸೋಲಾರ್ ತಂತಿ)ಯನ್ನು ಸಹ ಹಾಕಿದ್ದರು ಅದು ಸಹ ಏನು ಪ್ರಯೋಜನ ಆಗಲಿಲ್ಲ ಈ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು ಉತ್ತಮ ಬೆಳೆಯು ಸಹ ಬಂದಿರುತ್ತದೆ ಪೆಂಜಳ್ಳಿ ಗುರುಪುರ ಭರತವಾಡಿ ವೀರನಹೊಸಳ್ಳಿ ಬಿಲ್ಲನ ಹೊಸಳ್ಳಿ ಅಗಸನಹುಂಡಿ ರಾಜೇಗೌಡ ನಹುಂಡಿ ಅಣ್ಣೂರು ಮೇಟಿಕುಪ್ಪೆ ಈ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿದೆ.

ಜೋಳ ಬಾಳೆ ಹತ್ತಿ ರಾಗಿ ಬೆಳೆಗಳನ್ನು ತಿಂದು ತುಳಿದುಹಾಕುತ್ತಿವೆ ಅರಣ್ಯ ಇಲಾಖೆಗೆ ಬೆಳೆ ಪರಿಹಾರದ ಅರ್ಜಿಗಳು ತುಂಬಾ ಕಡಿಮೆಯಾಗಿದ್ದವು ಆದರೆ 2019ರಿಂದ 20 -21ನೇ ಸಾಲಿನವರೆವಿಗೆ ಸುಮಾರು 400 ಅರ್ಜಿಗಳು ಬಂದಿದ್ದು 30ಲಕ್ಷದಷ್ಟು ಪರಿಹಾರ ಕೊಡಲಾಗಿದೆ ಹೆಚ್ಚು ಬರುತ್ತಿವೆ .ಕಳೆದೊಂದು ವಾರದಿಂದ ಆನೆಗಳು ಗುರುಪೂರ ಟಿಬೆಟ್ ಕ್ಯಾಂಪ್ ಪೆಂಜಹಳ್ಳಿ ಹತ್ತಿರ ಹಗಲು ಸಮಯದಲ್ಲಿ ಬರುತ್ತಿರುತ್ತವೆ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಲು ಭಯಪಡುತ್ತಿದ್ದಾರೆ.

ಎಪಿಎಂಸಿ ಅಧ್ಯಕ್ಷ ಮುದನೂಗರು ಸುಭಾಷ್ ರವರು ಅರಣ್ಯ ಇಲಾಖೆ ರೈಲ್ವೆ ಕಂಬಿಗಳನ್ನು ಹಾಕಿರುವುದು ಎತ್ತರ ಕಡಿಮೆಯಾಗಿದೆ ಅದನ್ನು ಹೆಚ್ಚಿಸಬೇಕು ಮತ್ತು ಒಂದು ಕಂಬಿಯಿಂದ ಮತ್ತೊಂದು ಕಂಬಿಗೆ ಅಂತರವನ್ನು ಸಹ ಕಡಿಮೆ ಮಾಡಿದ್ದಲ್ಲಿ ಆನೆ ಮೇಲೆ ಮೇಲೆ ನಡೆಯುವುದು ಬೇಲಿ ಮಧ್ಯದಲ್ಲಿ ನುಗ್ಗುವುದನ್ನು ಸಹ ತಡೆಯಬಹುದು ಇದನ್ನು ಇಲಾಖೆ ತ್ವರಿತವಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *