1 ಗಂಟೆ 11 ನಿಮಿಷಕ್ಕೆ ಕಾವೇರಿ ತೀರ್ಥೋದ್ಬವ,ವಿಸ್ಮಯ ಕಣ್ತುಂಬಿಕೊಂಡ ಭಕ್ತರು

 

ಮಡಿಕೇರಿ:17 ಅಕ್ಟೋಬರ್ 2021

ನ@ದಿನಿ

                      ಆ ವಿಸ್ಮಯ, ಆ ಸಮಯಕ್ಕಾಗಿ ಅಲ್ಲಿ ಕಾದುಕುಳಿತಿತ್ತು ಸಾವಿರ ಸಾವಿರ ಭಕ್ತರ ದಂಡು,ಪ್ರತಿಯೊಬ್ರ ಕಂಗಳಲ್ಲಿ ಕುತೂಹಲ,ಮಿಸ್ ಮಾಡಿಕೊಳ್ಳದೆ ಆ ವಿಸ್ಮಯವನ್ನು ನೋಡಲೇಬೇಕೆಂದು ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತಾ ಕುಳಿತಿದ್ರೂ. ಇದು ಕೊಡಗು ಜಿಲ್ಲೆಯ ತೀರ್ಥೋದ್ಬವ ಕ್ಷೇತ್ರ ತಲಕಾವೇರಿಯಲ್ಲಿ ನಡೆದ ತೀರ್ಥೋದ್ಬವದ ಕ್ಷಣಗಳ ಚಿತ್ರಣ.

           

                   ತುಲಾಸಂಕ್ರಮಣದ ಮಕರ ಲಗ್ನದಲ್ಲಿ ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಕಾವೇರಿಮಾತೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾಲನಿಗದಿಯಾಗಿತ್ತು, ನಿಗದಿಯಾದ ಸಮಯಕ್ಕೆ ಸರಿಯಾಗಿಯೇ ಉಕ್ಕಿಬಂದ ಕಾವೇರಿಮಾತೆಯನ್ನು ಕಂಡು ಸಾವಿರಾರು ಭಕ್ತರು ಸಂಭ್ರಮದಿಂದ ಜೈ ಜೈಮಾಥ,ಕಾವೇರಿ ಮಾತಾ. ಉಕ್ಕಿ ಬಾ ಉಕ್ಕಿ ಬಾ..ಗೋವಿಂದಾ..ಗೋವಿಂದಾ ಎಂದು ಜೈಗೋಷ ಹಾಕುತ್ತಾ ಕಾವೇರಿಮಾತೆಯನ್ನ ಕಣ್ತುಂಬಿಕೊಂಡರು

                        ಪ್ರತಿವರ್ಷ ತುಲಾಸಂಕ್ರಮಣದ ಸಮಯದಲ್ಲಿ ಕಾವೇರಿಮಾತೆ ತೀರ್ಥಸ್ವರೂಪಿಣಿಯಾಗಿ ಭೂಮಿಗೆ ಆಗಮಿಸಿ ಭಕ್ತರಿಗೆ ದರ್ಶನ ನೀಡುತ್ತಾಳೆ ಎಂಬುದು ಭಕ್ತರನಂಬಿಕೆ. ಅದಕ್ಕಾಗಿ ರಾಜ್ಯವಲ್ಲದೆ ತಮಿಳುನಾಡು ಕೇರಳಹಾಗು ತಮಿಳುನಾಡಿನಿಂದೆಲ್ಲಾ ಸಹಸ್ರಾರು ಭಕ್ತರು ಆಗಮಿಸಿ ಕಾವೇರಿಮಾತೆಯ ದರ್ಶನಮಾಡುತ್ತಾರೆ.ಬೆಳಿಗ್ಗೆಯಿಂದ ಕಾದುಕುಳಿತಿದ್ದ ಭಕ್ತರು ಕಾವೇರಿಮಾತೆಯ ಆಗಮನಕ್ಕಾಗಿ ಕಾದುಕುಳಿತಿದ್ದರು,ಕೈಯಲ್ಲಿ ಕೊಡ,ಕ್ಯಾನ್,ಬಾಟಲಿಗಳನ್ನು ಹಿಡಿದು ತೀರ್ಥಸಂಗ್ರಹಣೆಗಾಗಿ ಅಗಮಿಸಿದ್ರು ಕೊರೋನಾ ಇರುವ ಹಿನ್ನೆಲೆಯಲ್ಲಿ ಬ್ರಹ್ಮಕುಂಡಿಕೆ ಮುಂಬಾಗದಲ್ಲಿ ದೇವಾಲಯ ಅಡಳಿತ ಮಂಡಳಿಯಿಂದ ಕುಂಡಿಕೆ ಮುಂಭಾಗದಲ್ಲಿ ಕೊಳಯಿ ಮೂಲಕ ತೀರ್ಥ ತೆಗೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಇನ್ನೂ ಈ ತೀರ್ಥೋದ್ಬವ ಕ್ಷಣಗಣನೆ ಗೆ ಯುವಜನ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಸಂಸದ ಪ್ರತಾಪ್ ಸಿಂಹ ಶಾಸಕರುಗಳದ ಕೆ.ಜಿ ಬೋಪಯ್ಯ. ಅಪ್ಪಚ್ಚು ರಂಜನ್ ಸೇರಿದಂತೆ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ರು.

                     ತೀರ್ಥೋದ್ಭವದ ಹಿನ್ನೆಲೆಯಲ್ಲಿ ಗುರುರಾಜ್ ಅಚಾರ್ ಅವರ ನೇತ್ರತ್ವದಲ್ಲಿ 12 ಜನ ಅರ್ಚಕರ ತಂಡದಿಂದ ಬೆಳಿಗ್ಗೆ 11:30 ಗಂಟೆಯಿಂದಲ್ಲೆ ವಿವಿಧ ಪೂಜೆ ಪುನಸ್ಕಾರ, ಜಪ ತಪಗಳು ನಡೆದವು,ತೀರ್ಥೋದ್ಬವ ಕುಂಡಿಕೆಯ ಸುತ್ತಲೂ ಆಕರ್ಶಣಿಯವಾಗಿ ಪುಷ್ಪಾಲಂಕಾರ ಮಾಡಲಾಗಿತ್ತು.ಕಾವೇರಿ ತವರು ತಲಕಾವೇರಿಯ ಈ ವಿಸ್ಮಯ ಘಟನೆನೋಡಲು ಸಹಸ್ರಾರು ಭಕ್ತರು ಆಗಮಿಸಿದ್ದರಿಂದ ದೇವಾಲಯ ಸಮಿತಿ ಎಲ್ಲಾರೀತಿಯ ವ್ಯವಸ್ತೆಮಾಡಿತ್ತು.ತಲಕಾವೇರಿಗೆ ಆಗಮಿಸುವ ಮುನ್ನ ಬಾಗಮಂಡಲದಲ್ಲಿ ಪವಿತ್ರ ಸ್ನಾನಮಾಡಿದ ಭಕ್ತರು ನಂತರ ಕಾವೇರಿಮಾತೆಯನ್ನ ದರ್ಶನ ಮಾಡಿ ಪುನೀತರಾದರು.

                          ಒಟ್ನಲ್ಲಿ ದೇಶದ ಪವಿತ್ರ ತೀರ್ಥೋದ್ಬವಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಾವೇರಿಮಾತೆ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದಿದ್ದಾಳೆ, ಇದಕ್ಕಾಗಿ ದೂರದೂರುಗಳಿಂದ ಬಂದಿದ್ದ ಭಕ್ತರು ಕಾವೇರಿಮಾತೆಯನ್ನು ಕಣ್ತುಂಬಿಕೊಂಡರು.                                  

Leave a Reply

Your email address will not be published. Required fields are marked *