“ಒಂದು ಪ್ರೀತಿ ಎರಡು ಕನಸು”ಕಿರುಚಿತ್ರದಲ್ಲಿ ನೈಜ ಪ್ರೇಮ ಕಥೆ ಅನಾವರಣ

 

ಬೆಂಗಳೂರು:17 ಅಕ್ಟೋಬರ್ 2021

ನ@ದಿನಿ

                        ಕೊರೋನಾ ಎಂಬ ಮಾರಿ ಪ್ರಪಂಚದಾದ್ಯಂತ ಜೀವ ಜೀವನ ಎರಡನ್ನು ಕಸಿದುಕೊಂಡಿದ್ದು ಒಂದು ಕಡೆಯಾದರೇ ಇತ್ತ ಕೊರೋನಾ ಸಮಯದಲ್ಲಿ ಎರಡು ಕನಸುಗಳ ನಡುವೆ ಪ್ರೀತಿ ಹುಟ್ಟಿತ್ತು.ಆ ಪ್ರೀತಿಯ ನೈಜ ಪ್ರೇಮಕಥೆಯನ್ನು ಪ್ರೇಕ್ಷಕರ ಮನಗಳಿಗೆ ಮುಟ್ಟಿಸುವಂತಹ ಪ್ರಯತ್ನವನ್ನು ಅಭಿಲಾಷ್ ಮತ್ತು ಮೌನೇಶ್ ರಾಥೋಡ್ ತಂಡ ಮಾಡಿದೆ .

               *ಒಂದು ಪ್ರೀತಿ ಎರಡು ಕನಸು* ಕಿರುಚಿತ್ರಕ್ಕೆ ನಿರ್ಮಾಪಕಿ ಮಂಜುಳಾ ಪವರ್,ಬಂಡವಾಳ ಹಾಕಿದ್ದು, ಕಿರುತೆರೆಯಲ್ಲಿ ನಟಿಸುತ್ತಿದ್ದ ಸಹನಟ ಮೌನೇಶ್ ರಾಥೋಡ್ ಮಸ್ಕಿ ಹಾಗೂ ದಾವಣಗೆರೆ ಮೂಲದ ಪಲ್ಲವಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಕೋರೋನಾ ಸಂದರ್ಭದಲ್ಲಿ ಇಬ್ಬರು ಪ್ರೇಮಿಗಳು ಹೇಗೆ ಪ್ರೀತಿಸುತ್ತಿದ್ದರು . . ? ಮತ್ತು ಒಬ್ಬರನ್ನೊಬ್ಬರು ಭೇಟಿಯಾಗದೆ ತಮ್ಮ ಪ್ರೀತಿಯನ್ನು ಹೇಗೆ ಹಂಚಿಕೊಂಡರು. ಕರೋನಾ ಸಂದರ್ಭದಲ್ಲಿ ಭೇಟಿಯಾದರು ಅಥವಾ ಭೇಟಿಯಾಗದೆ ಒಬ್ಬರನ್ನೊಬ್ಬರು ನೋಡದೆ ಪ್ರೀತಿಯ ಮಾತುಗಳನ್ನು ಹೇಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರುಗಳ ಪ್ರೀತಿಯ ಪಾವಿತ್ರತೆ ಎಷ್ಟು ಎಂಬುದನ್ನು ಕಡಿಮೆ ಅವಧಿಯಲ್ಲಿ ತೋರಿಸಲು ಹೊರಟಿದ್ದಾರೆ ಅಭಿಲಾಷ್ ತಂಡ.

                   ಬೆಂಗಳೂರಿನ ದೇವನಹಳ್ಳಿಯಲ್ಲಿ ಚಿತ್ರಕ್ಕೆ ಚಾಲನೆ ನೀಡಿದ್ದು, ಅಭಿಲಾಷ್ ಹಾಸನ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಅವರೇ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಇನ್ನು ಈ ಕಿರುಚಿತ್ರವನ್ನು ಬೆಂಗಳೂರಿನ ಮೋಹನ್ ರಾಜ್ ಅದ್ಬುತವಾಗಿ ಚಿತ್ರಿಕರಿಸಿದ್ದಾರೆ,

                     ಮೌನೇಶ್ ರಾಥೋಡ್ ಅವರು,ಈ ಹಿಂದೆ ಅಳಗುಳಿಮನೆ, ಸಿಲ್ಲಿ ಲಲ್ಲಿ, ಕಾದಂಬರಿ, ಕಣಜ, ರೋಬೋ ಫ್ಯಾಮಿಲಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುವ ಮೂಲಕ ಯಶಸ್ಸು ಕಂಡ ಇವರದೆ ಆದ you tube channel ನಿಹಾರಿಕಾ ಕ್ರಿಯೇಷನ್ಸ್ ಎಂಬ ತಮ್ಮದೇ ಬ್ಯಾನರ್ ನಲ್ಲಿ, ಈಗಾಗಲೇ ಪ್ರೀತಿ ಬೆಸೆದ ಕೋರೋನಾ, ಹಾಗೂ ಯಮಧರ್ಮರಾಜ,ಎಂಬ ಎರಡು ಕಿರುಚಿತ್ರಗಳನ್ನು ನಿರ್ಮಾಣ/ನಾಯಕ ನಟನಾಗಿ ಮಾಡಿದ್ದು, *ಒಂದು ಪ್ರೀತಿ ಎರಡು ಕನಸು* ಎಂಬ ಈ ಕಿರುಚಿತ್ರ ಬ್ಯಾನರ್ ನಡಿ ಮೂಡಿಬರುತ್ತಿರುವ ಮೂರನೆ ಚಿತ್ರ ಇದು,

                      ಇನ್ನು ಈ ಕಿರುಚಿತ್ರದಲ್ಲಿ ಕೊಪ್ಪಳದ ಮಲ್ಲಿಕಾರ್ಜುನ್ ಬೆಂಗಳೂರು, ಮೂಲದ ರೂಪ ಮತ್ತಿತರರು ನಟಿಸುತ್ತಿದ್ದು, ಈ ತಿಂಗಳ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ಕಿರುಚಿತ್ರ ತೆರೆ ಕಾಣಲಿದೆ.

                         ನಾಯಕನಟನಾಗಿ ಅಭಿನಯಿಸುತ್ತಿರುವ ಮೌನೇಶ್ ರಾಥೋಡ್ , ಮತ್ತು ಹಾಸನ ಮೂಲದ ಅಭಿಲಾಶ್ ನಿರ್ದೇಶಿಸಿರುವ ಚಿತ್ರವು ಯಶಸ್ಸು ಕಾಣಲಿ ಎಂಬುದು ನಮ್ಮ ಭಾರತ ನ್ಯೂಸ್ ಟಿವಿ ಆಶಯ ಕೂಡಾ. 

Leave a Reply

Your email address will not be published. Required fields are marked *