ಹೆಣ್ಣು ಗಂಡು ಎಂಬ ತಾರತಮ್ಯ ಹೋಗಲಾಡಿಸಲು ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ:ನ್ಯಾಯಾಧೀಶ ಮಹಾವೀರ್ ಮ.ಕರೆಣ್ಣನವರ್

ಆಲಗೂಡು ರೇವಣ್ಣ

ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ.ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕರ ಫೆಡರೇಶನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ್ ಮ. ಕರೆಣ್ಣನವರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಮಾಯಣ ,ಮಹಾಭಾರತ ಕಾಲ ಘಟ್ಟದಲ್ಲಿ ಸೀತಾ ಮಾತೆ ಮತ್ತು ದ್ರೌಪದಿ ಸೇರಿದಂತೆ ಹಲವು ಮಹಿಳೆಯರಿಗೆ ತೊಂದರೆ ಎದುರಿಸ ಬೇಕಾಯಿತು ಇದಕ್ಕೆ ಕಾರಣ ರಾಮಾಯಣ ಮತ್ತು ಮಹಾಭಾರತ ಗ್ರಂಥದಲ್ಲಿ ಉಲ್ಲೇಖ ವಾಗಿರುವಂತ್ತೆ ಮಹಿಳೆಯರ ಕಾರಣ ಹಾಗಾಗಿ ಸಂವಿಧಾನ ರಚನೆ ವೇಳೆ ರಾಮಾಯಣ , ಮಹಾಭಾರತ ಸೇರಿದಂತೆ ಹಲವು ಗ್ರಂಥಗಳ ಅಧ್ಯಾಯನದ ಜೊತೆಗೆ ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಿಳೆಯರ ರಕ್ಷಣೆಗೆ ಅತ್ಯವಶ್ಯಕವಾದ ಕಾನೂನುಗಳು ಕಾಯ್ದೆಗಳನ್ನು ಅಡಕಗೊಳಿಸಿದ್ದಾರೆ ಎಂದರು.

ಭೂಮಿ ಉದ್ಬವವಾಗಿ ಗಂಡು ಹೆಣ್ಣು ಭೂಮಿ ಮೇಲೆ ಜನಿಸಿದ ದಿನದಿಂದಲೂ ಹೆಣ್ಣು ಗಂಡು ಎಂಬ ತಾರತಮ್ಯ ಜೊತೆಗೆ ಶೋಷಣೆ ಎಲ್ಲವೂ ನೆಡಯುತ್ತ ಬಂದಿದೆ ಇದು ಕೊನೆಗಾಣಿಸಲು ಸಂವಿಧಾನದಲ್ಲಿ ಮಹಿಳೆಯರ ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ, ಸುಂದರ ಬದುಕು ರೂಪಿಸುವ ಕಾರ್ಯಕ್ರಮ, ಯೋಜನೆಗಳ ಮೂಲಕ ಪ್ರತೀ ವರ್ಷ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಬಾರಿ 2022ರಲ್ಲಿ ‘ಇಂದಿನ ಲಿಂಗತ್ವ ಸಮಾನತೆ ನಾಳಿನ ಸುಸ್ಥಿರತೆ ಎನ್ನುವ ಧ್ಯೇಯವಾಕ್ಯದೊಂದಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಎಂದು ಮಹಿಳಾ ದಿನಚರಣೆಯ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ 40 ಜನ ನಿವೃತ್ತ ಅಂಗನಾಡಿ ಶಿಕ್ಷಕಿಯರು ಮತ್ತು ಸಹಾಯಕ ಶಿಕ್ಷಕಿಯರನ್ನ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ನ್ಯಾಯಾಧೀಶೆ ಅನಿತಾ ಕುಮಾರಿ,ಸರ್ಕಾರಿ ಸಹಾಯಕ ಅಭಿಯೋಜಕರು ಸುಮೀಯಾಬಾನು, ತಾಲ್ಲೂಕು ಆರೋಗ್ಯಧಿಕಾರಿ ಡಾ.ರವಿಕುಮಾರ್, ಬಿ.ಇ.ಓ ಮರಿಸ್ವಾಮಿ,ಸಿ.ಡಿ.ಪಿ.ಓ ಬಸವರಾಜು ,ಅರಣ್ಯ ಇಲಾಖೆ ನಾಗಾರ್ಜುನ ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ಮಾದಪ್ಪ,ವಕೀಲ ಸಂಘದ ಅಧ್ಯಕ್ಷ ತೋಟ್ಟವಾಡಿ ಮಹದೇವಸ್ವಾಮಿ,ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ,ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಜಯಂತಿ ,ಎ. ಸಿ.ಡಿ.ಪಿ.ಓ ಭವ್ಯ,ಅಂಗನವಾಡಿ ಕಾರ್ಯಕರ್ತರ ಸಂಘದ ಅಧ್ಯಕ್ಷೆ ಸರೋಜಮ್ಮ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *