ತಿ. ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಆಲಗೂಡು ರೇವಣ್ಣ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿ. ನರಸೀಪುರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಕಾಲೇಜಿನ
ಐಕ್ಯುಎಸಿ, ಸಾಂಸ್ಕೃತಿಕ ಸಮಿತಿ, ಯೂತ್ ರೆಡ್ ಕ್ರಾಸ್ ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾರದಮ್ಮ, ಸಾವಯವ ಕೃಷಿಕರು, ಮರಿಯಾಪುರ, ಚಾಮರಾಜನಗರ ಜಿಲ್ಲೆ ಅವರು ಆಗಮಿಸಿ ಮಾತನಾಡಿದರು. ತಮ್ಮ ಜೀವನಾನುಭವವವನ್ನು ಹಂಚಿಕೊಳ್ಳುತ್ತಾ ಮಾತನಾಡಿದ ಅವರು, ತಾವು ನರ್ಸಿಂಗ್ ತರಬೇತಿ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೂ, ಸಾವಯವ ಕೃಷಿಕನನ್ನು ವಿವಾಹವಾದ ನಂತರ ಕೃಷಿಯಲ್ಲಿ ಆಸಕ್ತಿ ತಳೆಯುವಂತಾ ಯಿತು. ಮನುಷ್ಯರು ಹಾಗು ಪಶು – ಪಕ್ಷಿಗಳ ಸ್ವಾಸ್ತ್ಯ ಮತ್ತು ನೆಲ – ಜಲ ಸಂರಕ್ಷಣೆಯ ದೃಷ್ಟಿಯಿಂದ ಸಾವಯವ ಕೃಷಿಯೇ ಸುಸ್ಥಿರವಾದದ್ದು ಎಂದರು. ವಿದ್ಯಾವಂತ ಯುವಕ – ಯುವತಿಯರು ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದು ಹೇಳಿದರು. ಸಾವಯವ ಕೃಷಿಕರಾದ ಸಿದ್ದರಾಜು ಅವರು ಕೃಷಿಯಲ್ಲಿ ಮಹಿಳೆಯರು ವಹಿಸುತ್ತಿರುವ ಮಹತ್ವದ ಪಾತ್ರವನ್ನು ಕುರಿತು ಹೇಳುತ್ತಾ, ಮಹಿಳೆಯರನ್ನು ಸರಿ ಸಮಾನರಾಗಿ ಕಾಣುವ ಹಾಗೂ ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಂತರ ಮಹಿಳಾ ಮುನ್ನಡೆ ಸಂಘಟನೆಯ ಸಂಚಾಲಕರಾದ ಪೂರ್ಣಿಮಾ ಅವರು ತಮ್ಮ ತಂಡದ ಸದಸ್ಯರಾದ ಅಂಜಲಿ ಮತ್ತು ಶಿಲ್ಪಾ ಅವರೊಂದಿಗೆ ಸೇರಿ ಇಂದು ಹೆಣ್ಣು ಮಕ್ಕಳು ಅನುಭವಿಸುತ್ತಿರುವ ತಾರತಮ್ಯ, ದೌರ್ಜನ್ಯ ಹಾಗೂ ಜನರ ಮನಸ್ಥಿತಿಯ ಬದಲಾವಣೆ ಹೇಗೆ ಎಂಬುದನ್ನು ಮನದಟ್ಟು ಮಾಡಲು, “ಅರಿವಿನ ಪಯಣ” ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಾಗೂ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಮಶುಪಾಲರಾದ ಡಾ. ಕೆ. ನಾಗರತ್ನಮ್ಮ ಅವರು ಮಾತನಾಡಿ, ಹೆಣ್ಣು ಮಕ್ಕಳು ವಿದ್ಯೆ ಕಲಿತು ದಿಟ್ಟತನದಿಂದ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಸಮಾಜವು ಮಹಿಳೆಯರ ಸಮಾನ ಸ್ಥಾನಮಾನ ಮತ್ತು ಸ್ವತಂತ್ರ ಆಸ್ತಿತ್ವವನ್ನು ಗುರುತಿಸಿ ಗೌರವಿಸಬೇಕು ಎಂದರು.

ಜೀವಿತಾ ಎಂ., ಕನ್ನಡ ಸಹಾಯಕ ಪ್ರಾಧ್ಯಾಪಕರು, ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಮಾಧವಿ ಎಂ. ಕೆ., ಸಂಚಾಲಕರು, ಮಹಿಳಾ ದೌರ್ಜನ್ಯ ತಡೆ ಸಮಿತಿ, ಅವರು ಪ್ರಾಸ್ತವಿಕ ನುಡಿಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಪ್ರೇಮಕುಮಾರಿ ಎಲ್., ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರು ವಂದಿಸಿದರು.

ವಿದ್ಯಾರ್ಥಿನಿ ದಕ್ಷಿಣಾ ಗೌಡ ಆಶಯ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ ಸಾವಯವ ಕೃಷಿಕರಾದ. ಶಾರದಮ್ಮ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *