ಜಮೀನಿನಲ್ಲಿ ಮರಕ್ಕೆ ನೇಣು ಬಿಗದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

Nandini mysore
ಬೆಟ್ಟದಪುರ:   ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಬೆಟ್ಟದತುಂಗ ರಸ್ತೆಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರಿನ ಜಮೀನಿನಲ್ಲಿ ಮರಕ್ಕೆ ನೇಣು ಬಿಗದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಬೆಟ್ಟದಪುರದ ಸುಣ್ಣದ ಬೀದಿ ನಿವಾಸಿ ರಾಜ ಅಳಿಯಾಸ್ ರಾಜಚಾರಿ(48) ಎಂಬಾತ ಬೆಟ್ಟದಪುರ ನಿವಾಸಿ ಬಿ.ಕೆ ಸದಾಶಿವ ಎಂಬುವರಿಗೆ ಸೇರಿದ ಮಂಟಿ ಜಮೀನಿನ ಕಕ್ಕೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರು ಗಾರೆ ಕೆಲಸ ಮಾಡುತ್ತಿದ್ದರು. ಮಾ.5ರ ಶನಿವಾರ ಎಂದಿನAತೆ ಮನೆಯಲ್ಲಿ ಮಲಗಿದ್ದರು. ಮುಂಜಾನೆ ಕುಟುಂಬದವರು ಎದ್ದು ನೋಡಿದಾಗ ಮನೆಯಲ್ಲಿ ಇರಲಿಲ್ಲ. ತಕ್ಷಣ ಎಲ್ಲಾ ಕಡೆ ಹುಡಕಲು ಪ್ರಯತ್ನಿಸಿದ್ದಾಗ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮೃತ ವ್ಯಕ್ತಿಯ ಶವದಲ್ಲಿ ನಾಲಿಗೆಯನ್ನು ಹಲ್ಲಿನಿಂದ ಕಚ್ಚಿದ್ದಂತೆ, ತಲೆಯ ಬಲಭಾಗದಲ್ಲಿ ಹಾಗೂ ಬಲಮುಖದಲ್ಲಿ ಅಲ್ಲದೆ ಪಾದಗಳಲ್ಲಿ ರಕ್ತಕಲೆಗಳು ಮತ್ತು ಮೈಯಲ್ಲಿ ಮಣ್ಣು ಆಗಿರುವುದರಿಂದ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮೃತರ ಪುತ್ರ ಸಿ.ಆರ್ ಶರತ್ ನಮ್ಮ ತಂದೆಯನ್ನು ಯಾರೋ ಕರೆದುಕೊಂಡು ಹೋಗಿ ದ್ವೇಶದಿಂದ ಈ ರೀತಿ ಮಾಡಿದ್ದಾರೋ ಅಥವಾ ಇವರೇ ಬೇರೆ ಯಾವುದೋ ವಿಚಾರದಲ್ಲಿ ಮನನೊಂದು ಈ ರೀತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನಮಗೆ ಅನುಮಾನವಿದೆ. ಹಾಗಾಗಿ ಮೃತದೇಹವನ್ನು ಪರಿಶೀಲಿಸಿ ಮುಂದಿನ ಕಾನೂನು ರೀತಿ ಕ್ರಮಕೈಗೊಂಡು ಸಾವಿನ ನಿಜವಾದ ಕಾರಣವನ್ನು ತಿಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್, ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ಹಾಗೂ ಸಿಬ್ಬಂದಿಗಳು ಮತ್ತು ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ, ಸ್ಥಳ ಮಹಜರ್ ಮಾಡಿದರು. 

Leave a Reply

Your email address will not be published. Required fields are marked *