ಜೂ.19 ರಂದು ಸುರಕ್ಷ ಮಕ್ಕಳ ಆಸ್ಪತ್ರೆ ಉದ್ಘಾಟಿಸಲಿದ್ದಾರೆ ಮಹಾರಾಜ ಯದುವೀರ್ : ಡಾ.ಭಕ್ತವತ್ಸಲ

ಮೈಸೂರು:17 ಜೂನ್ 2022

ನಂದಿನಿ ಮೈಸೂರು

ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಜೂನ್
19 ರಂದು ಸುರಕ್ಷ ಮಕ್ಕಳ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ ಎಂದು ಡಾ . ಭಕ್ತವತ್ಸಲ ತಿಳಿಸಿದರು.

ಮೈಸೂರಿನ ಶಾರದಾದೇವಿನಗರದಲ್ಲಿ ಪ್ರಥಮವಾಗಿ ಆರಂಭವಾಗಿರುವ ಆಸ್ಪತ್ರೆ ಕಟ್ಟಡವನ್ನು ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಉದ್ಘಾಟಿಸಲಿದ್ದಾರೆ.

ಮಕ್ಕಳಿಗಾಗಿ ವಿಶೇಷವಾದ ಸೌಲಭ್ಯವನ್ನು ಹೊಂದಿರುವ 24 * 7 ಮಕ್ಕಳ ತುರ್ತು ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಈ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ . 3 ನೇ ಹಂತದ ವಿಶೇಷ ನಿಯೋನಾಟಲ್ ಐಸಿಯು ಇದೆ , ಎಂಡೋಕ್ರೈನಾಲಜಿ , ಪಿಡಿಯಾಟ್ರಿಕ್ ಸರ್ಜರಿ , ಪಿಡಿಯಾಟ್ರಿಕ್ ಕಾರ್ಡಿಯಾಲಜಿ , ಪಿಡಿಯಾಟಿಕ್ ಯುರೋಲಾಜಿ ಮುಂತಾದ ಸೇವೆ ಲಭ್ಯವಿದೆ. ಸೂಪರ್ ಸ್ಪೆಷಲಿಟಿ ಡಾಕ್ಟರ್ ಗಳು ಮಕ್ಕಳ ಸಮಸ್ಯೆ ಆಲಿಸಿ ಚಿಕಿತ್ಸೆ ನೀಡಲಿದ್ದಾರೆ . ನಮ್ಮಲ್ಲಿ 44 ಬೆಡ್ ವ್ಯವಸ್ಥೆ ಇದೆ.ಈ ರೀತಿಯ ಸೌಲಭ್ಯ ಹೊಂದಿರುವ ಆಸತ್ರೆಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೊದಲನೇಯದಾಗಿದೆ .ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಡಾ . ಭಕ್ತವತ್ಸಲ ಮನವಿ ಮಾಡಿದರು.

ಜಿಲ್ಲಾ ಪತ್ರಕರ್ತರ ಸುದ್ದಿಗೋಷ್ಠಿಯಲ್ಲಿ ಡಾ. ಕೃಷ್ಣಕುಮಾರ್ ಹೆಚ್.ಸಿ. ಡಾ. ರಾಘವೇಂದ್ರ ಆರ್ ಹಾಜರಿದ್ದರು.

Leave a Reply

Your email address will not be published. Required fields are marked *