ಮೈಸೂರು: 16 ಜೂನ್ 2022
ನಂದಿನಿ ಮೈಸೂರು
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು ಜಿ ಮಾದೇಗೌಡರವರು ಐತಿಹಾಸಿಕ ಗೆಲುವು ಸಾಧಿಸಿದ ನಂತರ ಚುನಾವಣಾಧಿಕಾರಿಗಳಾದ ಡಾ.ಜಿ.ಸಿ.ಪ್ರಕಾಶ್ ಮತ್ತು ಜಿಲ್ಲಾಧಿಕಾರಿಗಳಾದ ಡಾ.ಬಗಾಧಿ ಗೌತಮ್ ರವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು.
ಈ ವೇಳೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರು ಮೈಸೂರು ನಗರದ ಜನತೆಯ ಪರವಾಗಿ ತುಂಬು ಹೃದಯದಿಂದ ಅಭಿನಂದಿಸಿ ಸಿಹಿ ನೀಡುವ ಮೂಲಕ ಶುಭಾಶಯ ತಿಳಿಸಿದರು.ಈ ವೇಳೆ ಮಾಜಿ ಸಚಿವರಾದ ತನ್ವೀರ್ ಸೇಠ್,ಪಿಎಂ ನರೇಂದ್ರಸ್ವಾಮಿ,ಮಾಜಿ ಶಾಸಕರಾದ ಕಳಲೇ ಎನ್ ಕೇಶವಮೂರ್ತಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್,ಗಂಡಸಿ ಮಂಜುನಾಥ್,ಮುಖಂಡರಾದ ಡಿ ರವಿಶಂಕರ್,ಸುರೇಶ್,ಸುನೀಲ್ ನಾರಯಣ್,ನಟರಾಜು ಮತ್ತಿತರರು ಉಪಸ್ಥಿತರಿದ್ದರು.