ಯೆಮೆನ್ ದೇಶದ ರೋಗಿಗೆ ಹೃದಯ ವೈಫಲ್ಯ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕಾವೇರಿ ಹಾರ್ಟ್ ಎಂಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್

ಮೈಸೂರು:17 ಜೂನ್ 2022

ನಂದಿನಿ ಮೈಸೂರು

ಹೃದಯ ವೈಫಲ್ಯವಾಗಿದ್ದ ಯೆಮೆನ್ ದೇಶದ ರೋಗಿ ಮೈಸೂರಿನ ಸಿದ್ದಾರ್ಥನಗರದ ಕಾವೇರಿ ಹಾರ್ಟ್ ಎಂಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಚೇರ್ಮನ್ ಡಾ.ಚಂದ್ರಶೇಖರ್ ಮಾಹಿತಿ ನೀಡಿದರು.

ರೋಗಿ ಮೊಹಮದ್ ಹುಸೇನ್ ಅಹಮದ್ , ಹಲವು ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆ ಇದ್ದು , ಈ ಹಿಂದೆ ಸೈಂಟಿಂಗ್ ಮಾಡಿಸಿಕೊಂಡಿದ್ದರು . ಕಳೆದ ವರ್ಷದ ಅವಧಿಯಿಂದ ತೀವ್ರ ಉಸಿರಾಟದ ತೊಂದರೆ , ನಿದ್ದೆ ಮಾಡಲು ಮತ್ತು ನಡೆಯಲು ಸಾಧ್ಯವಾಗದೆ ತೊಂದರೆಗಳಿಂದ ಬಳಲುತ್ತಿದ್ದರು.ನಮ್ಮ ಆಸ್ಪತ್ರೆಗೆ ಬಂದಾಗ ಹೃದಯ ವೈಫಲ್ಯ ಶಸ್ತ್ರಚಿಕಿತ್ಸೆಯ ಮಾಡಲಾಯಿತು. ರೋಗಿಗೆ ಚೇತರಿಕೆ ಹೊಂದಲು ಹೆಚ್ಚಿನ ಸಮಯ ಬೇಕಾಗುತ್ತದೆ .ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಮಧುಪ್ರಕಾಶ್
ಮುಖ್ಯ ಹೃದಯ ಸಂಬಂಧಿ ಅರಿವಳಿಕೆ ತಜ್ಜ ಡಾ . ಸಾತ್ವಿಕ್ ಟೆಲ್ಕರ್ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೌಲಭ್ಯ ನಿರ್ದೇಶಕ ಸಂದೀಪ್ ಪಾಟೀಲ್ ಹಾಜರಿದ್ದರು.

Leave a Reply

Your email address will not be published. Required fields are marked *