ಕೋಲಾರದಲ್ಲಿ ಸಿದ್ದರಾಮಯ್ಯನವರ ಗೆಲುವು ಖಚಿತ: ಸುನಿಲ್ ಬೋಸ್ ವಿಶ್ವಾಸ

ಟಿ.ಕೆ.ಬಸವರಾಜು / ನಂದಿನಿ ಮೈಸೂರು

ಕೋಲಾರದಲ್ಲಿ ಸಿದ್ದರಾಮಯ್ಯನವರ ಗೆಲುವು ಖಚಿತ ಕಾಂಗ್ರೆಸ್ ಯುವ ದಲಿತ ನಾಯಕ ಸುನಿಲ್ ಬೋಸ್ ವಿಶ್ವಾಸ

ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರ ಗೆಲುವು ಸತ ಸಿದ್ದ ಎಂದು ಕಾಂಗ್ರೆಸ್ ಪಕ್ಷದ ದಲಿತ ಯುವ ನಾಯಕ ಸುನಿಲ್ ಬೋಸ್ ರವರು ವಿಶ್ವಾಸ ವ್ಯಕ್ತಪಡಿಸಿದರು.

ಇಂದು ನಂಜನಗೂಡಿನ ತಮ್ಮ ನಿವಾಸದಲ್ಲಿ 26ರಂದು ಮೈಸೂರಿನಲ್ಲಿ ನಡೆಯುವ ಐತಿಹಾಸಿಕ ಪ್ರಜಾ ಧ್ವನಿ ಯಾತ್ರೆಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಈ ಐತಿಹಾಸಿಕ ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಯಾತ್ರೆಯ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಆಗುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ಅವರ ಗೆಲುವು ಸತಸಿದ್ಧ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ಏನೇ ಕುತಂತ್ರ ಅಪಪ್ರಚಾರ ಮಾಡಿದರು ನಡೆಯುವುದಿಲ್ಲ ಎಂದು ತಿಳಿಸಿದ ಅವರು ಸಿದ್ದರಾಮಯ್ಯನವರು ದಲಿತ ವಿರೋಧಿಯಲ್ಲ ಅವರು ರಾಜಕೀಯವಾಗಿ ಯಾರನ್ನು ಮುಗಿಸಿಲ್ಲ ಚುನಾವಣೆಯಲ್ಲಿ ಸೋಲು ಗೆಲುವನ್ನು ತೀರ್ಪು ನೀಡುವವರು ಕ್ಷೇತ್ರದ ಮತದಾರರು ಆದರೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷದ ನಮ್ಮ ನಾಯಕರುಗಳ ಸೋಲಿಗೆ ಸಿದ್ದರಾಮಯ್ಯನವರೆ ಕಾರಣ ಎಂದು ಅಪಪ್ರಚಾರ ಮಾಡುವ ಮೂಲಕ ಕ್ಷೇತ್ರದ ಮತದಾರರು ನಮ್ಮ ಕಡೆಗೆ ವಾಲುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ ಆದರೆ ಸಿದ್ದರಾಮಯ್ಯನವರು ಕೇವಲ ಒಂದು ಸಮಾಜಕ್ಕೆ ಸೀಮಿತವಾದ ನಾಯಕರಲ್ಲ ಅವರು ಎಲ್ಲ ವರ್ಗದ ಅನ್ಯಾಯ ಕೊಳಗಾದ ದೀನ ದಲಿತರ ತುಳಿತಕೊಳ್ಳಗಾದ ಅನ್ಯಾಯಕ್ಕೆ ಒಳಗಾದವರ ಪರವಾಗಿರುವ ಜನನಾಯಕರು ಕೋಲಾರ ಕ್ಷೇತ್ರದಲ್ಲಿ ಯಾವುದೇ ಜಾತಿ ವಿಷ ಬೀಜ ಬಿತ್ತಿದ್ರು ಸಹ ಅಲ್ಲಿನ ಮತದಾರರು ಆ ಎಲ್ಲಾ ಅಪಪ್ರಚಾರಗಳನ್ನು ಬದಿಗೊತ್ತಿ ಸಿದ್ದರಾಮಯ್ಯನವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಶಕ್ತಿ ಏನು ಎಂದು ತೋರಿಸುತ್ತಾರೆ ಎಂದು ಸಿದ್ದರಾಮಯ್ಯನವರ ಬಗ್ಗೆ ಅಪಪ್ರಚಾರ ಮಾಡುವ ವಿರೋಧಿಗಳಿಗೆ ಕಾಂಗ್ರೆಸ್ ಪಕ್ಷದ ದಲಿತ ಯುವ ನಾಯಕ ಸುನಿಲ್ ಬೋಸ್ ರವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀಕಂಟೀಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಇಂಧನ ಬಾಬು ವೀರಶೈವ ಮುಖಂಡ ಬುಲೆಟ್ ಮಹಾದೇವಪ್ಪ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮೂಗ ಶೆಟ್ಟಿ ಕೆಬಿ ಸ್ವಾಮಿ ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹರದನಹಳ್ಳಿ ನಂಜುಂಡಸ್ವಾಮಿ ಚಿನ್ನದ ಗುಡಿಗುಂಡಿ ಬಸವೇಗೌಡ ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಅರತಲೆ ತಮ್ಮಣ್ಣೇಗೌಡ ಗುರು ಸಿದ್ದಪ್ಪ ಕಡಬೂರು ಸೋಮೇಶ್ ಪಾಪಣ್ಣ ಹೊಲಗೆರೆಯ ಶಿವ ಮಲ್ಲಪ್ಪ ಹುಲ್ಲಹಳ್ಳಿ ಸುನಿಲ್ ಚೌಡಯ್ಯ ಕುಮಾರ ಅಜ್ಗರ್ ಫಯಾಜ್ ನಜೀರ್ ಹಲ್ಲರೆ ಚನ್ನನಾಯಕ ಮಹೇಶ್ ಮಹದೇವ ನಾಯಕ ಕುರಿಹುಂಡಿ ಭಾಸ್ಕರ ಸುರೇಶ್ ಹೆಜ್ಜಿಗೆ ಕೃಷ್ಣ ಸೇರಿದಂತೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *