ಪ್ರಜಾ ಧ್ವನಿ ಸಮಾವೇಶ ಯಶಸ್ವಿಗೆ ಶ್ರಮಿಸಿ ಎಂದು ಕಾಂಗ್ರೆಸ್ ಮುಖಂಡರಿಗೆ ಕರೆ ಕೊಟ್ಟ ಶಾಸಕ ಡಾ.ಯತೀಂದ್ರ

ಟಿ.ಕೆ.ಬಸವರಾಜು / ನಂದಿನಿ ಮೈಸೂರು

ಮೈಸೂರಿನಲ್ಲಿ ಜ. 26ರಂದು ನಡೆಯಲಿರುವ ಪ್ರಜಾ ಧ್ವನಿ ಸಮಾವೇಶ ಯಶಸ್ವಿಗೆ ಕಾಂಗ್ರೆಸ್ ಮುಖಂಡರು ಶ್ರಮಿಸುವಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ಕೊಟ್ಟರು.

ಮೈಸೂರು ಜಿಲ್ಲಾ ವಿಭಾಗದ ಐತಿಹಾಸಿಕ ಪ್ರಜಾ ಧ್ವನಿ ಸಮಾವೇಶವನ್ನು ಮೈಸೂರಿನಲ್ಲಿ ಅನುಕೂಲವಾಗಿದ್ದು ಸಮಾವೇಶಕ್ಕೆ ಜಿಲ್ಲೆಯಿಂದ ಐವತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕ ಸಮಾವೇಶ ಯಶಸ್ವಿಯಾಗಲು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಚುನಾಯಿತ ಪ್ರತಿನಿಧಿಗಳು ಸಮವಹಿಸುವಂತೆ ಶಾಸಕ ಡಾಕ್ಟರ್ ಯತೀಂದ್ರ ಸಿದ್ರಾಮಯ್ಯನವರು ಕರೆ ನೀಡಿದರು.

ಇಂದು ತಮ್ಮ ನಿವಾಸದಲ್ಲಿ ವರುಣ ಕ್ಷೇತ್ರದ ತಗಡೂರು ಬ್ಲಾಕ್ ವರುಣ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಚುನಾವಣೆ ಸಮಯ ಹತ್ತಿರವಾಗುತ್ತಿದ್ದು ಈ ಸಮಾವೇಶ ಕೊನೆಯ ಸಮಾವೇಶವಾಗಿದ್ದು ನಾವು ಚುನಾವಣೆಗೆ ಸಿದ್ಧರಾಗಬೇಕಾಗಿರುವುದರಿಂದ ಈ ಪ್ರಜಾ ಧ್ವನಿ ಸಮಾವೇಶವನ್ನು ಯಶಸ್ವಿಗೆ ಎಲ್ಲರೂ ಸಮವಹಿಸಬೇಕು ಎಂದು ತಿಳಿಸಿದರಲ್ಲದೆ ವರುಣ ಕ್ಷೇತ್ರದಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು ಅದೇ ರೀತಿ ಜಿಲ್ಲೆಯಿಂದ ಒಟ್ಟಾರೆ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಈ ಸಮಾವೇಶವು ಕಾರ್ಯಕರ್ತರಿಗೆ ಹುರಿದುಂಬಿಸುವ ಮೂಲಕ ಶಕ್ತಿ ತುಂಬಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ವೀರಶೈವ ಮುಖಂಡ ವರುಣ ಮಹೇಶ್ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮುದ್ದೇಗೌಡ ಪುರಸಭಾ ಅಧ್ಯಕ್ಷ ಮಂಜೂರು ಸ್ವಾಮಿ ಮುಖಂಡರಾದ ಕೀಳನಪುರ ಮಹದೇವಪ್ಪ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ್ ಚಿನ್ನಂಬಳ್ಳಿ ಸಿ ಆರ್ ಮಹದೇವ್ ದಾಸನೂರು ನಾಗೇಶ್ ಮಣಿ ಮೆಲ್ಲಹಳ್ಳಿ ತಿಮ್ಮಯ್ಯ ನಾಗಜನಾಯಕ ಪುರಸಭೆ ಮಾಜಿ ಅಧ್ಯಕ್ಷ ಸೋಮಣ್ಣ ಮಹೇಶ ಬಿಪಿ ಮಹಾದೇವ ದೇವನೂರು ಮಹದೇವಮ್ಮ ಸೇರಿದಂತೆ ಕ್ಷೇತ್ರದ ಸುಮಾರು 150ಕ್ಕೂ ಹೆಚ್ಚು ಮಂದಿ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *