ನಂದಿನಿ ಮೈಸೂರು
ಬೆಂಬಲ ಬೆಲೆಯಲ್ಲಿ ರಾಗಿ ಮತ್ತು ಭತ್ತ ಖರೀದಿಗೆ ಚಾಲನೆ
*ಮಾರ್ಚ್ 31ರವರಗೆ ಕಾಲಾವಕಾಶ -ಎಸ್.ಟಿ.ಎಸ್
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ ಹಾಗೂ ಭತ್ತವನ್ನು ತಲಾ 50 ಲಕ್ಷ ಕ್ವಿಂಟಾಲ್ ಖರೀದಿಸಲು ಅನುಮತಿ ನೀಡಿದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಬೆಂಬಲ ಬೆಲೆಯಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕರ್ನಾಟಕದ 11-12 ಜಿಲ್ಲೆಗಳಿಂದ ಈ ಪ್ರಮಾಣ ಖರೀದಿ ಯಾಗಲಿದೆ.ರಾಗಿ ಬೆಲೆ 3500 ಕ್ಕಿಂತ ಹೆಚ್ಚಿದ್ದು ಮಾರುಕಟ್ಟೆಗಿಂತ ಹೆಚ್ಚು ಬೆಲೆ ಇದೆ.ಕರ್ನಾಟಕ ತನಗೆ ಬೇಕಾದಷ್ಟನ್ನು ಬಳಸಿಕೊಂಡು ಉಳಿದದ್ದನ್ನು ತಮಿಳುನಾಡಿಗೆ ನೀಡಲಿದೆ ಎಂದರು
ಟಿ.ನರಸೀಪುರದ ಚಿರತೆ ದಾಳಿಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿಗಳು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು ಹುಲಿ ಚಿರತೆ ದಾಳಿಯಿಂದ ಆಗುವ ಅನಾಹುತಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಹಾಗೂ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳಾಗದಂತೆ ಸೂಚಿಸಿದ್ದಾರೆ
ಮೈಸೂರು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದು ಅವರು ಬಂದು ನಂತರ ಆ ಭಾಗದ ಮುಖಂಡರ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದೆಂದರು.
ಸ್ಥಳೀಯರ ಬೇಡಿಕೆಯಂತೆ ಆ ಭಾಗಕ್ಕೆ ಬಸ್ ಸೌಲಭ್ಯ ಗಿಡ ಗಂಟಿಗಳನ್ನು ತೆಗೆಯಲಾಗುವುದು,
ಕಬ್ಬು ಕಟಾವಿಗೆ ಆದೇಶ ಹಾಗೂ ಕಂಡಲ್ಲಿ ಗುಂಡಿಕ್ಕಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದರು.