ನಗುವಿನ ಸಕ್ಕರೆ ಹಂಚಲಿದ್ದಾರೆ ಶುಗರ್ ಲೆಸ್ ಚಿತ್ರ ತಂಡ

 

ನಂದಿನಿ ಮೈಸೂರು

ಒಂದು ಸಕ್ಕರೆ ಖಾಯಿಲೆ ಬಗ್ಗೆ ಜನರಲ್ಲಿರುವ ಕಲ್ಪನೆಯನ್ನು ಹಾಸ್ಯಮಿಶ್ರಿತ ಕಥಾ ಹಂದರದೊಂದಿಗೆ ಹೇಳುವ ಚಿತ್ರ ಶುಗರ್‌ಲೆಸ್ ಡಾಟರ್ ಆಫ್‌ಪಾರ್ವತಮ್ಮ ನಿರ್ಮಾಪಕ ಶಶಿಧರ ಕೆ.ಎಂ. ಅವರು ಮೊದಲಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರ ಜುಲೈ 8 ರಂದು ರಾಜ್ಯ ಅಲ್ಲದೆ ವಿದೇಶಗಳಲ್ಲೂ ಸಹ ಬಿಡುಗಡೆಯಾಗಲಿದೆ .

ಇತ್ತೀಚೆಗಷ್ಟೇ ಈ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರದ ಕಂಟೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಯಾವುದೇ ಕಡಿತ ಮತ್ತು ಮೂಟ್ ಇಲ್ಲದೆ ಯು ಪ್ರಮಾಣ ಪತ್ರ ನೀಡಿದೆ . ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ . ಚಿತ್ರದ ಸಹ ನಿರ್ಮಾಪಕರಾಗಿ ವಿಜಯಲಕ್ಷ್ಮಿ ಕೃಷ್ಣಗೌಡ ಸಾತ್ ನೀಡಿದ್ದಾರೆ . ತನ್ನ ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಸಕ್ಕರೆ ಖಾಯಿಲೆ ಬಗ್ಗೆ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ಉತ್ತಮ ಸಂದೇಶವವನ್ನು ಹೇಳಲಾಗಿದೆ . ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ದಿವ್ಯ ಶಶಿಧರ್‌ ಅವರು ನಿರ್ಮಿಸಿರುವ ಶುಗರ್‌ಲೆಸ್ ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ , ಅನೂಪ್ ಸೀಳನ್ ಅವರ ಸಂಗೀತ ಸಂಯೋಜನೆ ಇದ್ದು , ಡಾ | ವಿ . ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ . ಗುರು ಕಶ್ಯಪ್ ಚಿತ್ರದ ಸಂಭಾಷಣೆಗಳನ್ನು ಹೆಣೆದಿದ್ದಾರೆ . ಚಿತ್ರದ ಸಂಕಲನ ರವಿಚಂದ್ರನ್ , ನೃತ್ಯ ಸಂಯೋಜನೆ ಮುರಳಿ ಮಾಸ್ಟರ್ , ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ . ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ .

ಪೃಥ್ವಿ ಅಂಬಾರ್ ಚಿತ್ರದ ನಾಯಕನಾಗಿದ್ದು , ಬಿಗ್ವಾಸ್‌ನ ಪ್ರಿಯಾಂಕ ತಿಮ್ಮೇಶ್ ನಾಯಕಿ ಪಾತ್ರ ನಿರ್ವಹಿಸಿದ್ದಾರೆ . ಉಳಿದಂತೆ ಹಿರಿಯ ನಿರ್ದೇಶಕರಾದ ಎಸ್ . ನಾರಾಯಣ್ ಅವರು ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ರಘು ರಾಮನಕೊಪ್ಪ , ಧರ್ಮಣ್ಣ ಕಡೂರ್ , ನವೀನ್ ಡಿ.ಪಡೀಲ್ , ಗಿರೀಶ್ ಜತ್ತಿ , ಹೊನ್ನವಳ್ಳಿ ಕೃಷ್ಣ , ಮಾಲತಿ ಮುಂತಾದವರು ಅಭಿನಯಿಸಿದ್ದಾರೆ . ಎಲ್ಲರಿಗೂ ತಿಳಿದಿರುವಂತೆ ಸಕ್ಕರೆ ಖಾಯಿಲೆ ಬಂದರೂ ಅದನ್ನು ನಿಗ್ರಹಿಸಿ ಹೇಗೆ ಸುಖ ಜೀವನ ನಡೆಸಬಹುದು ಎಂದು ಈ ಚಿತ್ರದ ಮೂಲಕ ಹೇಳಲಾಗಿದೆ ಪ್ರಪಂಚದಲ್ಲಿ ಬಹುತೇಕ ಸಂಖ್ಯೆಯ ಮಧುಮೇಹಿಗಳಿದ್ದಾರೆ . ಆದರೆ , ಅದನ್ನು ಆಧರಿಸಿ ಈವರೆಗೆ ಯಾವುದೇ ಸಿನಿಮಾ ನಿರ್ಮಾಣವಾಗಿ ತೆರೆಗೆ ಬಂದಿಲ್ಲ . ಅಲ್ಲದೆ , ಯಾವಾಗಲೂ ಕಂಟೆಂಟ್ ಚಲನಚಿತ್ರಗಳನ್ನು ಬೆಂಬಲಿಸುವ ಪ್ರೇಕ್ಷಕರಿಗೆ ಶುಗರ್‌ಲೆಸ್ ಸಿನಿಮಾ ಖಂಡಿತ ಇಷ್ಟವಾಗುತ್ತದೆ ಎಂದು ಚಿತ್ರತಂಡ ಹೇಳಿದೆ.

ದಿಯಾ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ ನಟ‌ ಪೃಥ್ವಿ ಅಂಬರ್. ಬೈರಾಗಿ ಸಿನಿಮಾದ ಯಶಸ್ಸಿನ‌ ಅಲೆಯಲ್ಲಿರೋ ಪೃಥ್ವಿ, ಶುಗರ್ ಲೆಸ್ ಸಿನಿಮಾ ಬಗ್ಗೆ ಜಪ ಮಾಡ್ತಾ ಇದ್ದಾರೆ.

ಈ ಚಿತ್ರದ ವಿಶೇಷತೆ ಬಗ್ಗೆ ಮಾತನಾಡಿರೋ ಪೃಥ್ವಿ ಅಂಬರ್, ಚಿತ್ರದ ಟೈಟಲ್ ಅಷ್ಟೇ ಶುಗರ್​ಲೆಸ್, ಸಿನಿಮಾದ ತುಂಬಾ ಸ್ವೀಟ್ ಇದೆ. ಇದರಿಂದ ನಮ್ಮ ಲೈಫ್ ಸ್ಟೈಲ್ ಬದಲಾಗಬೇಕು, ಅನುಪ್ ಸೀಳಿನ್ ಅವರು ಅದ್ಭುತವಾದ ಮ್ಯೂಸಿಕ್ ರಚನೆ ಮಾಡಿದ್ದಾರೆ. ಇದು ಸೀರಿಯಸ್ ಸಿನಿಮಾ ಅಲ್ಲ, ಮನೋರಂಜನಾತ್ಮಕ ಚಿತ್ರ ಎಂದು ಹೇಳಿದರು.
ಬಳಿಕ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಆದ ಶಶಿಧರ್‌ ಮಾತನಾಡುತ್ತ, ಇದೊಂದು ವಿಶೇಷವಾದಂತ ಸಿನಿಮಾ, ಈ ಹಿಂದೆ ಬಂದಂಥ ಕಂಟೆಂಟ್ ಒರಿಯಂಟೆಡ್ ಚಿತ್ರಗಳು ಗೆದ್ದಿವೆ. ಇದು ಪ್ರತಿಯೊಂದು ಮನೆಗೆ ಸಂಬಂದಿಸಿದ ಸಿನಿಮಾ ಆಗಿದೆ. ಇಂದು ನಮ್ಮ ಲೈಫ್ ಸ್ಟೈಲ್ ಬದಲಾಗಿದ್ದು, ಈಗ ಚಿಕ್ಕ ಮಕ್ಕಳಲ್ಲೂ ಸಹ ಶುಗರ್, ಬಿಪಿ,‌ ಹಾರ್ಟ್ ಅಟ್ಯಾಕ್ ನಂಥ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳ ಜೊತೆ ನಾವು ಹೇಗೆ ಬದುಕಬೇಕು, ನಮ್ಮ ಲೈಫ್ ಸ್ಟೈಲ್ ಹೇಗಿರಬೇಕು ಎಂಬುದರ ಜೊತೆಗೆ ಮನೋರಂಜನೆಯ ಮೂಲಕ ಮೆಸೇಜ್ ಹೇಳುವ ಪ್ರಯತ್ನ ಈ ಚಿತ್ರದ ಮೂಲಕ ಆಗಿದೆ ಎಂದರು.

ವಿದೇಶಗಳಲ್ಲಿ ಕೂಡ ನಮ್ಮ ಚಿತ್ರ ರಿಲೀಸ್ ಆಗಲಿದೆ. ನಟ ಹಾಗೂ ಸಹ ನಿರ್ಮಾಪಕರಾದ ಕೃಷ್ಣೇಗೌಡ ಮಾತನಾಡುತ್ತ, ಲಾಕ್ ಡೌನ್ ಸಂದರ್ಭದಲ್ಲಿ ಈ ಚಿತ್ರವನ್ನು ಶುರು ಮಾಡಿದೆವು ಎಂದರು. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರು ಡಾಕ್ಟರ್ ಪಾತ್ರ ಮಾಡಿದ್ದು, ನಟ ದತ್ತಣ್ಣ ಅವರ ಮೂಲಕ ಚಿತ್ರದಲ್ಲಿ ಮೂರು ಜನರೇಷನ್ ಅಂದರೆ ಮಗು ಯುವಕ ಹಾಗೂ ವಯಸ್ಸಾದವರ ತೊಂದರೆ ಬಗ್ಗೆ ಹೇಳಲಾಗಿದೆ. ಇಡೀ ಚಿತ್ರವನ್ನು ಕಾಮಿಡಿಯಾಗಿ ಹೇಳಲಾಗಿದ್ದು, ಈಗಾಗಲೇ ಹಿಂದಿ ಸೇರಿದಂತೆ ಬೇರೆ ಭಾಷೆಗೆ ರೈಟ್ಸ್ ಮಾರಾಟವಾಗಿದ್ದು, ನಾನು ಸೇಪ್ ಆಗಿದ್ದೇನೆ ಎಂದೂ ಶಶಿಧರ್ ಹೇಳಿದರು.

 

Leave a Reply

Your email address will not be published. Required fields are marked *