ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಕಳ್ಳಿಯನ್ನ ಬಂಧಿಸುವಲ್ಲಿ ಯಶಸ್ವಿಯಾದ ಆಲನಹಳ್ಳಿ ಠಾಣೆ ಪೊಲೀಸರು

 

ಮೈಸೂರು: 8 ಜುಲೈ 2022

ನಂದಿನಿ ಮೈಸೂರು

ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಕಳ್ಳಿಯನ್ನು
ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭಾಮಣಿ(42) ಬಂಧಿತ ಮನೆಕಳ್ಳಿ. ತನ್ನ ಮನೆಯ ಅಕ್ಕಪಕ್ಕದವರನ್ನ ಪರಿಚಯಿಸಿಕೊಳ್ಳುತ್ತಿದ್ದ ಪ್ರಭಾ ಮಣಿ ಬೀಗಗಳನ್ನ ಕದ್ದು ನಕಲಿ ಮಾಡಿಸಿಕೊಂಡು ನಂತರ ಅದೇ ಜಾಗದಲ್ಲಿ ಇರಿಸುತ್ತಿದ್ದಳು. ನಂತರ ಮನೆಯವರು ಹೊರಗೆ ಹೋಗಿದ್ದ ವೇಳೆ ಹೊಂಚುಹಾಕಿ ನಕಲಿ ಕೀ ಬಳಸಿ ಕೃತ್ಯವೆಸಗುತ್ತಿದ್ದಳು.ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳಲ್ಲಿ ನಕಲಿ ಕೀ ಬಳಸಿ ಕೃತ್ಯವೆಸಗಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.ಬಂಧಿತಳಿಂದ ನಗದು ಸೇರಿದಂತೆ 11.94 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ,ಡಿಸಿಪಿ ಗೀತಾಪ್ರಸನ್ನ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಶಿಧರ್ ಉಸ್ತುವಾರಿಯಲ್ಲಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ.ಆಲನಹಳ್ಳಿ ಠಾಣೆಯ ಪಿಎಸ್ಸೈ ಮಹೇಂದ್ರ,ಪ್ರವೀಣ್ ಕುಮಾರ್,ಎಎಸ್ಸೈ ಲಕ್ಷ್ಮೀನಾರಾಯಣ್,ಸಿಬ್ಬಂದಿಗಳಾದ ಶಿವಪ್ರಸಾದ್,ಚೌಡಪ್ಪ,ಸುಂದರಿ,ಸುಹೀಲ್,ರಂಗನಾಥ್,ರುಕ್ಮಿಣಿ,ಯಂಕವ್ವ ಜಗದಾಳೆ,ಶೋಭಾ,ಅನಿತಾ,ರಂಜಿತಾ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *