ಸುಧಾಮೂರ್ತಿ ಅವರ ಹುಟ್ಟು ಹಬ್ಬ ಸಸಿ ನೆಟ್ಟು ಶುಭ ಕೋರಿದ ವಿಪ್ರ ಮಹಿಳೆಯರು

ನಂದಿನಿ ಮೈಸೂರು

ವಿಪ್ರ ಮಹಿಳಾ ಸಂಗಮ (ರಿ), ಮೈಸೂರು , ವತಿಯಿಂದ ಇನ್ಫೋಸಿಸ್ ಮುಖ್ಯಸ್ಥರಾದ ಹಾಗೂ ಸಮಾಜ ಸುಧಾರಕರಾದ ಸುಧಾಮೂರ್ತಿ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರಣ್ಯಪುರಂ ರಾಮಕೃಷ್ಣ ಆಸ್ಪತ್ರೆ ಮುಂಭಾಗದ ಉದ್ಯಾನವನದಲ್ಲಿ ಸಸಿ ನೆಡವ ಮೂಲಕ ಆಚರಣೆ ಮಾಡಲಾಯಿತು

ನಗರ ಪಾಲಿಕೆ ಸದಸ್ಯ ಮಾವಿ ರಾಮ್ ಪ್ರಸಾದ್ ಅವರು ಮಾತನಾಡುತ್ತ ಸುಧಾ ಮೂರ್ತಿಯವರು ತಮ್ಮ ಸಂಸ್ಥೆ ವತಿಯಿಂದ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ ಹಾಗೂ ತಮ್ಮ ಜೀವನಶೈಲಿಯನ್ನು ಸರಳತೆಯಿಂದ ನಡೆಸುತ್ತಿರುವುದು ಇವರ ವಿಶೇಷ ಗುಣವಾಗಿರುತ್ತದೆ, ಕೋವಿಡ್ ಬಂದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿ ವಿಶೇಷತೆ ಮೆರೆದಿದ್ದಾರೆ, ಕೊಡಗಿನ ಮಳೆ ಹಾನಿಯಾದ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸ್ವಂತ ಸೂರು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ ಈ ಮೂಲಕ ಕೊಡಗಿನ ಜನರಿಗೆ ನೆರವಾಗಿ ನಿಂತಿರುತ್ತಾರೆ, ಇವರ ಜನ್ಮದಿನದ ಪ್ರಯುಕ್ತ ಸಸಿ ನೀಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷದ ವಿಷಯ ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಡಾ||ಲಕ್ಷ್ಮಿ ದೇವಿ, ನಗರ ಪಾಲಿಕೆ ಸದಸ್ಯರಾದ ಮ ವಿ ರಾಮಪ್ರಸಾದ್ ,ಮುಖಂಡರಾದ ಸಂದೀಪ್ ಚಂದ್ರಶೇಖರ್, ವನಜ, ಸತೀಶ್, ನಾಗಶ್ರೀ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು

 

Leave a Reply

Your email address will not be published. Required fields are marked *