ಕೃಷ್ಣ ಜನ್ಮಾಷ್ಟಮಿ ವೇಷಭೂಷಣ ಸ್ಪರ್ಧೆ

ನಂದಿನಿ ಮೈಸೂರು

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾ ಸಂಸ್ಥೆಯ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 6ವರ್ಷದ ಒಳಗಿನ ಮಕ್ಕಳಿಗೆ ಬಾಲ ರಾಧಾಕೃಷ್ಣ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಂಡಿದೆ 250ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷದಲ್ಲಿ ಕಣ್ಮನ ಸೆಳೆಯುವ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು

ಸ್ಪರ್ಧೆಯ ವಿಜೇತರದ

ಹೆಬ್ಬಾಳ ನಿವಾಸಿ ಪ್ರದೀಪ್ ಬಾಬು ರಂಜಿತಾ ರವರ ಪುತ್ರ ಜೀವಿತ್ ರವರೆಗೆ ಮೊದಲನೇ ಬಹುಮಾನ 2222 ರೂ ನಗದು ಹಾಗೂ ಆಕರ್ಷಕ ಬಹುಮಾನ ನೀಡಲಾಯಿತು ,
ಪಡುವಾರಹಳ್ಳಿ ನಿವಾಸಿ ವಿನೋದ್ ರಾಜ್ ಹಾಗೂ ಲಾವಣ್ಯ ರವರ ಪುತ್ರ
ಶೌರ್ಯ ವಿ ರಾಜ್,
ರವರಿಗೆ ದ್ವಿತೀಯ ಬಹುಮಾನ 1111ರೂ ನಗದು ಹಾಗೂ ಬಹುಮಾನ ನೀಡಲಾಯಿತು ,
ತೃತೀಯ ಬಹುಮಾನ ಕನಕಗಿರಿ ನಿವಾಸಿ ಶಿವು ರವರ ಪುತ್ರಿ ದಿಶಾ ಎಸ್ ರವರಿಗೆ 555ರೂ ನಗದು ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು,
ಎಲ್ಲ ವೇಷಭೂಷಣ ಸ್ಪರ್ಧೆಯಲ್ಲಿ ಭಾಗಿ ಆದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು

ಪ್ರಶಸ್ತಿ ನೀಡಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜಾರಾಂ
‘ಯಾವುದೇ ಜಾತಿ ಭೇದವಿಲ್ಲದೇ ಜಗತ್ತಿನಾದ್ಯಂತ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ’
‘ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ವಿಚಾರಗಳು ಪ್ರಸ್ತುತವಾಗಿವೆ. ಚತುರನಾಗಿದ್ದ ಕೃಷ್ಣನ ಮಾರ್ಗದರ್ಶನದಿಂದ ಮಹಾಭಾರತದಲ್ಲಿ ಪಾಂಡವರು ಗೆಲುವು ಸಾಧಿಸಲು ಸಾಧ್ಯವಾಯಿತು. ಯಾದವ ಕುಲದಲ್ಲಿ ಜನ್ಮ ತಾಳಿದ ಮಾನವ ದೈವ ಸ್ವರೂಪನಾಗಿರುವುದಕ್ಕೆ ಕೃಷ್ಣ ಉದಾಹರಣೆಯಾಗಿದ್ದಾನೆ. ಇದಕ್ಕೆ ಯಾದವ ಕುಲ ಬಾಂಧವರು ಹೆಮ್ಮೆ ಪಡಬೇಕು’
ಕೃಷ್ಣನ ತತ್ವ ವಿಚಾರಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಕೃಷ್ಣನ ಜೀವನದ ಕಥೆಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕು. ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮಾನವ ಜನ್ಮ ಮಹತ್ವವಾಗಿದ್ದು, ಉತ್ತಮ ಕಾರ್ಯಗಳನ್ನು ಮಾಡಬೇಕು ಎಂದು ಅವರು ಸಲಹೆ
ನೀಡಿದರು.

ಇದೇ ಸಂದರ್ಭದಲ್ಲಿ
ಬಿಜೆಪಿ ನಗರ ಅಧ್ಯಕ್ಷ ಟಿ ಎಸ್ ಶ್ರೀವತ್ಸ ,
ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಮ್ ,ಉದ್ಯಮಿ ಪುರಾಣಿಕ್ ,ಮಹರ್ಷಿ ವಿದ್ಯಾಸಂಸ್ಥೆಯ ತೇಜಸ್ ಶಂಕರ್ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಜಯಶ್ರೀ ,ಸವಿತಾ ,ಅಪೂರ್ವ ಸುರೇಶ್ , ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್
,ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್ ,ರಾಕೇಶ್ ಕುಂಚಿಟಿಗ ,ಸುಚೀಂದ್ರ ,ಚಕ್ರಪಾಣಿ ,ಜೀವನ್ ,ಹರೀಶ್ ನಾಯ್ಡು ,ನವೀನ್ ಕೆಂಪಿ ,ದುರ್ಗಾಪ್ರಸಾದ್ ,ಚೇತನ್ ಕಾಂತರಾಜು ,
ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *