ನಂದಿನಿ ಮೈಸೂರು
ಮೈಸೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈಸೂರು ಹಾಗೂ ಕೇಂದ್ರ ಸಂವಹನ ಕಾರ್ಯಾಲಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಮೈಸೂರಿನ ಮುಖ್ಯ ಕಚೇರಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ದ 75 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಸ್ವಾತಂತ್ರ್ಯ ಕ್ಕಾಗಿ ತ್ಯಾಗ, ಬಲಿದಾನ ಹಾಗೂ ಹೋರಾಡಿದವರನ್ನು ಒಳಗೊಂಡ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರದರ್ಶನ ಉದ್ಘಾಟಿಸಿದ ಎಸ್ ಬಿಐ ಮೈಸೂರು ವಿಭಾಗದ ಮುಖ್ಯ ವ್ಯವಸ್ಥಾಪಕ ಸತೀಶ್ ಕುಲಕರ್ಣಿ ಮಾತನಾಡಿ, ಕಳೆದ ಮೂರು ದಿನಗಳಿಂದ ಒಂದು ವಿವಿಧ ಶಾಖೆಗಳಲ್ಲಿ ಮೂರು ದಿನಗಳಿಂದ ನಾನಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಹೇಳಿದರು.
ಮುಖ್ಯ ವ್ಯವಸ್ಥಾಪಕ ರಾದ ದತ್ತಾತ್ರೇಯ ಪೈ ಮಾತನಾಡಿ, ಗ್ರಾಹಕ ಸ್ನೇಹಿಯಾಗಿ ಬ್ಯಾಂಕ್ ಜನರೊಂದಿಗೆ ನಡೆಯುತ್ತಿದೆ. ಹೀಗಾಗಿ 75 ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಸೇನಾನಿಗಳ ಬಲಿದಾನ ಹೇಗಿತ್ತು ಎಂಬೆಲ್ಲಾ ಮಾಹಿತಿ ವಿವರ ಪ್ರದರ್ಶನ ಜನರನ್ನು ಆಕರ್ಷಿಸಲಿವೆ ಎಂದರು.
ಸ್ವಾತಂತ್ರ್ಯ ಹೋರಾಟಗಾರ ರಾದ ಗೋಪಾಲ್ ಅಯ್ಯಂಗಾರ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಸಂವಹನ ಕಾರ್ಯಾಲಯದ ದರ್ಶನ್, ಎಸ್ ಬಿಐ ಮುಖ್ಯಸ್ಥ ರಾದ ರೇಖಾರಾವ್ ಇನ್ನಿತರರು ಉಪಸ್ಥಿತರಿದ್ದರು.