ಸುಧಾಮೂರ್ತಿ ಅಭಿಮಾನಿ ಸೇವಾ ಬಳಗದ ವತಿಯಿಂದ ಸುಧಾಮೂರ್ತಿ ಹುಟ್ಟುಹಬ್ಬ, ಮಕ್ಕಳಿಗೆ ಊಟದ ವ್ಯವಸ್ಥೆ

ನಂದಿನಿ ‌ಮೈಸೂರು

ಸುಧಾಮೂರ್ತಿ ಅಭಿಮಾನಿ ಸೇವಾ ಬಳಗದ ವತಿಯಿಂದ ಸುಧಾಮೂರ್ತಿ ರವರ ಹುಟ್ಟುಹಬ್ಬ ಮತ್ತು ದಿ.ಚಿಕ್ಕವೆಂಕಟಯ್ಯ ಹಾಗೂ ತಿಮ್ಮಮ್ಮರವರ ಸ್ಮರಣಾರ್ಥ ಸ್ನೇಹಾಲಯ ಚಿಲ್ಟನ್ಸ್ ಕೇರ್ ಸೆಂಟರ್ ನಲ್ಲಿರುವ ಮಕ್ಕಳಿಗೆ ಊಟದ ವೆವಸ್ಥೆ ಮಾಡಲಾಯಿತು.

ಸುಧಾಮೂರ್ತಿ ಅಭಿಮಾನ ಸೇವಾ ಬಳಗದ ಅಧ್ಯಕ್ಷರಾದ ವಸಂತ ಮಾತನಾಡಿ, ಭಾರತೀನಗರದಲ್ಲಿ ಇತ್ತೀಚಗಷ್ಟೇ ಸುಧಾಮೂರ್ತಿ ಅಭಿಮಾನಿ ಸೇವಾ ಬಳಗವನ್ನು ಸ್ಥಾಪಿಸಿ, ಹಲವಾರು ಸೇವಾ ಕಾರ್ಯಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡಲಾಗುತ್ತಿದೆ ಎಂದರು.

ನೆಲದನಿ ಬಳಗದ ಅಧ್ಯಕ್ಷರಾದ ಲಂಕೇಶ್‌ ಮಾತನಾಡಿ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.

ಸ್ನೇಹಾಲಯ ಚಿಲ್ಟನ್ಸ್ ಕೇರ್ ಸೆಂಟರ್ ನ ಸಿಬ್ಬಂಧಿ ದೇವರಾಜು ಮಾತನಾಡಿ, ಸುದಾಮೂರ್ತಿ ರವರು ಎಷ್ಟು ಸರಳವಾಗಿದ್ದಾರೋ, ಅದೇ ರೀತಿ ಅವರ ಅಭಿಮಾನಿ ಬಳಗದವರೂ ಸಹ ಸರಳತೆಯನ್ನು ಹೊಂದಿರುವುದರ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದರು.

ಈ ಸಂದರ್ಭದಲ್ಲಿ ತುಳಸಿ, ರಘು, ಸೇರಿದಂತೆ ಸುಧಾಮೂರ್ತಿ ಅಭಿಮಾನ ಸೇವಾ ಬಳಗದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *