ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಚಿಣ್ಣರಿಗೆ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ

ಪಿರಿಯಾಪಟ್ಟಣ:22 ಆಗಸ್ಟ್ 2022

ಸತೀಶ್ ಆರಾಧ್ಯ/ನಂದಿನಿ ಮೈಸೂರು

ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಚಿಣ್ಣರಿಗೆ ಶ್ರೀಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಿತು.

ಐದು ವರ್ಷದೊಳಗಿನ ಚಿಣ್ಣರಿಗೆ ನಡೆದ ಸ್ಪರ್ಧೆಯಲ್ಲಿ ತಾಲ್ಲೂಕು ಕಚೇರಿ ಶಿರಸ್ತೇದಾರ್ ಗಳಾದ ಟ್ರಿಜಾ ಹಾಗೂ ದ್ರಾಕ್ಷಾಯಣಿ ಅವರು ತೀರ್ಪುಗಾರರಾಗಿ ಆಗಮಿಸಿ ವಿಜೇತರಿಗೆ ಬಹುಮಾನ ವಿತರಿಸಿದರು, ಸ್ಪರ್ಧೆಯಲ್ಲಿ ಒಟ್ಟು 74 ಚಿಣ್ಣರು ಭಾಗವಹಿಸಿದ್ದರು ಎಲ್ಲರಿಗೂ ಅಭಿನಂದನಾ ಪತ್ರ ಹಾಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು, ಮುಸ್ಲಿಂ ಬಂಧುಗಳು ತಮ್ಮ ಚಿಣ್ಣರಿಗೆ ಶ್ರೀಕೃಷ್ಣ ವೇಷ ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪೃಥ್ವಿ ಜ್ಯುವೆಲ್ಸ್ ವ್ಯವಸ್ಥಾಪಕ ಕೆ.ಪ್ರಜ್ವಲ್ ಅವರು ಮಾತನಾಡಿ ಸಂಸ್ಥೆಯ ವತಿಯಿಂದ ಗುಣಮಟ್ಟದ ಆಭರಣಗಳ ಮಾರಾಟ ಜತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಅರಿವು ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭ ಪೃಥ್ವಿ ಜ್ಯುವೆಲ್ಸ್ ಸಿಬ್ಬಂದಿ ದರ್ಶನ್ ಕುಮಾರ್, ದಿಲೀಪ್ ಕುಮಾರ್, ಮಂಜುನಾಥ್, ರಾಬಿನ್ ಪೀಟರ್, ಬಸವರಾಜು, ಸೌಮ್ಯ, ರೇವತಿ, ಅಶ್ವಿನಿ, ಅಖಿಲ್ ಕುಮಾರ್ ಮತ್ತಿತರಿದ್ದರು.

Leave a Reply

Your email address will not be published. Required fields are marked *