ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದಿಂದ ಸಕಲ ಸೌಲಭ್ಯ ಕಲ್ಪಿಸಲಾಗುತ್ತದೆ : ಸುಬ್ಬಣ್ಣ ಭರವಸೆ

ಮಂಡ್ಯ:27 ಸೆಪ್ಟೆಂಬರ್ 2021 

ನ@ದಿನಿ

ಮಂಡ್ಯ ಜಿಲ್ಲೆ ಸಾತನೂರು ಗ್ರಾಮದಲ್ಲಿ
ಶ್ರೀ ಕನಕ ಸೇವಾ ಟ್ರಸ್ಟ್ ( ರಿ)
ವತಿಯಿಂದ ಗ್ರಾಮದ ಕುರುಬರ ಜನಸಂಖ್ಯೆ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ 2021 ವರದಿ ಬಿಡುಗಡೆ ಹಾಗೂ ಎಸೆಸೆಲ್ಸಿ / ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ ಸುಬ್ರಹ್ಮಣ್ಯ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರುು.

ನಂತರ ಸಾತನೂರು ಗ್ರಾಮದ ಕುರುಬರ ಜನಸಂಖ್ಯೆ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ 2021 ಮಾಹಿತಿ ಉಳ್ಳ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಸಮಾರಂಭ ಆರಂಭಕ್ಕೂ ಮುನ್ನ ಗ್ರಾಮಸ್ಥರು ನಿರ್ಮಿಸಲು ಉದ್ದೇಶಿರುವ ಕನಕ ಧಾಮ ಮೀಸಲಿಟ್ಟ ಜಾಗಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿಯಾದ ಸೋಮಶೇಖರ್ ರವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ಉದಯಕುಮಾರ್ ರವರು,
ಮಂಡ್ಯ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯಾದ ಯಲ್ಲಮ್ಮ ರವರು , ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಸುರೇಶ್, ಕುರುಬರ ಸಂಘದ ಉಪಾಧ್ಯಕ್ಷರಾದ ಪುಟ್ಟ ಬಸವಯ್ಯ, ಮುಖಂಡರುಗಳಾದ ರಾಜು,ಶೇಖರಪ್ಪ, ನಾಗರಾಜು, ಲೋಕೇಶ್, ಜವರೇಗೌಡ, ಬೋರಪ್ಪ, ದೊಡ್ಡಯ್ಯ, ಮತ್ತು ಸಾತನೂರು ಗ್ರಾಮದ ಕನಕ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಸದಸ್ಯರು ಹಾಗೂ ಜಿಲ್ಲಾ ಹಾಗೂ ತಾಲೂಕು ಸಂಘದ ನಿರ್ದೇಶಕರುಗಳು ಸದಸ್ಯರುಗಳು ಮತ್ತು ಗ್ರಾಮದ ಯಜಮಾನರುಗಳು, ಯುವಕ ಮಿತ್ರರು ಉಪಸ್ಥಿತರಿದ್ದರು…

Leave a Reply

Your email address will not be published. Required fields are marked *