ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ 2019ರ ವಿವಿಧ ದತ್ತಿ ನಿಧಿ ಪ್ರಶಸ್ತಿ ಪ್ರಕಟ

 

ಮೈಸೂರು:28 ಸೆಪ್ಟೆಂಬರ್ 2021

ನ@ದಿನಿ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು 2019ರ ವಿವಿಧ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.


ಪ್ರಶಸ್ತಿ ಪುರಸ್ಕೃತರು :
ಕಿಡಿ ಶೇಷಪ್ಪ ದತ್ತಿ ಪ್ರಶಸ್ತಿಯು ಹೊಸಪೇಟೆ ಟೈಮ್ಸ್ ಸಂಪಾದಕಿಯಾದ ರೇಖಾ ಪ್ರಕಾಶ್,ಸುವರ್ಣನ್ಯೂಸ್ ಹಾಗೂ ಕನ್ನಡ ಪ್ರಭ ಸಂಪಾದಕರಾದ ರವಿ ಹಗಡೆಯವರಿಗೆ ಪ್ರತಿಷ್ಠಿತ ‘ಡಿವಿಜಿ’, ಪ್ರಜಾವಾಣಿಯ ಬಿ.ಎಂ.ಹನೀಫ್ ಅವರಿಗೆ ‘ಹೆಚ್.ಎಸ್.ದೊರೆಸ್ವಾಮಿ’, ಗೊಮ್ಮಟವಾಣಿಯ ಸಂಪಾದಕರಾದ ಎಸ್.ಎನ್ ಅಶೋಕ ಕುಮಾರ್ ಗೆ ‘ ಗೊಮ್ಮಟಮಾಧ್ಯಮ’ ಹಿರಿಯ ಪತ್ರಕರ್ತರಾದ ಎಸ್.ಕೆ.ಶೇಷಚಂದ್ರಿಕಾ ಅವರಿಗೆ ‘ ಪಾಟೀಲ್ ಪುಟ್ಟಪ್ಪ’, ಅ.ಚ.ಶಿವಣ್ಣನವರಿಗೆ ‘ಎಸ್.ವಿ.ಜಯಶೀಲರಾವ್ ‘ , ಕುಂದಪ್ರಭ ಸಂಪಾದಕರಾದ ಯು.ಎಸ್.ಶೆಣೈಗೆ ‘ಪಿ.ಆರ್.ರಾಮಯ್ಯ’ ಮಲೆನಾಡ ಮಂದಾರ ಪತ್ರಿಕೆ ಸಂಪಾದಕರಾದ ಕೆ. ಆರ್.ಮಂಜುನಾಥ್ ಅವರಿಗೆ ‘ಗರುಡನಗಿರಿ ನಾಗರಾಜ್ ‘, ಹಿರಿಯ ಪತ್ರಕರ್ತರಾದ ಕೋಡಿ ಹೊಸಳ್ಳಿ ರಾಮಣ್ಣನವರಿಗೆ ‘ ಎಚ್.ಕೆ.ವೀರಣ್ಣ ಗೌಡ’ ಶಿಡ್ಲು ಪತ್ರಿಕೆ ಸಂಪಾದಕರಾದ ರೇವಣ್ಣ ಸಿದ್ದಯ್ಯ ಮಹಾನುಭವಿಮಠ ರಿಗೆ ‘ ಪಿ.ರಾಮಯ್ಯ ‘, ಹುಬ್ಬಳ್ಳಿಯ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥೆ ರಶ್ಮಿಯವರಿಗೆ ‘ ಯಶೋಧಮ್ಮ ಜಿ.ನಾರಾಯಣ’, ಶಿವಮೊಗ್ಗದ ವಿಜಯವಾಣಿ ಬ್ಯೂರೊ ಮುಖ್ಯಸ್ಥರಾದ ಕೆ.ಎನ್. ಶಾಂತಕುಮಾರ್ ಅವರಿಗೆ ‘ಎಂ.ನಾಗೇಂದ್ರ ರಾವ್’, ವಿಜಯ ಕರ್ನಾಟಕದ ರಾಮಸ್ವಾಮಿ ಹುಲುಕೋಡ್ ರಿಗೆ ‘ ಮಿಂಚು ಶ್ರೀನಿವಾಸ’ , ಸಿಟಿ ಹೈಲೈಟ್ಸ್ ನ ಸಂಪಾದಕರಾದ ಪಿ.ಸುನೀಲ ಕುಮಾರ್ ಗೆ ‘ಹೆಚ್.ಎಸ್.ರಂಗಸ್ವಾಮಿ’ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಕಾರ್ಯದರ್ಶಿ ಜಯರಾಂ ಮತ್ತಿಕೆರೆ ಇವರುಗಳು ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸಂಘದ ವತಿಯಿಂದ ಯಾವುದೇ ಸಮಾರಂಭ ನಡೆದಿರಲಿಲ್ಲ.

ವಿಶೇಷ ಪ್ರಶಸ್ತಿ :
ರಾಯಚೂರು ಕನ್ನಡ ಪ್ರಭ ವರದಿಗಾರರಾದ ಪ್ರಹ್ಲಾದ ಗುಡಿ, ಕೋಲಾರ ಹಿರಿಯಪತ್ರಕರ್ತರಾದ ಮುನಿವೆಂಕಟೇಶ ಗೌಡ, ತೀರ್ಥಹಳ್ಳಿಯ ವಿಜಯಕರ್ನಾಟಕ ಪತ್ರಿಕೆಯ ಎಂ.ಕೆ.ರಾಘವೇಂದ್ರ ಮೆಗರವಳ್ಳಿ, ಬೆಂಗಳೂರಿನ ವಾರ್ತಾ ಭಾರತಿಯ ಪ್ರಕಾಶ್ ರಾಮಜೋಗಿಹಳ್ಳಿ ಇವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply

Your email address will not be published. Required fields are marked *