ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ನಟಿ ಸ್ಪಂದನಾ ಸೋಮಣ್ಣ

ಸಿನಿಮಾ: ‘ಕರಿಮಣಿ’ ಧಾರಾವಾಹಿ ಮತ್ತು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ತಮ್ಮ ಆರು ವರ್ಷಗಳ ಗೆಳೆಯ ವರುಣ್ ಮುನಿರಾಜು ಜೊತೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬಿಗ್‌ಬಾಸ್ ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಶೀಘ್ರದಲ್ಲೇ ವರುಣ್ ಮುನಿರಾಜು ಜೊತೆ ಹಸೆಮಣೆ ಏರಲಿದ್ದಾರೆ. ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದ ವರುಣ್ ಜೊತೆ ಸ್ಪಂದನಾ ಹಸೆಮಣೆ ಏರಲಿದ್ದು ಪ್ರಿವೆಡ್ಡಿಂಗ್ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಮದುವೆ ಸಿದ್ಧತೆಗಳ ನಡುವೆ ಹೂ ಮುಡಿಸುವ ಶಾಸ್ತ್ರದ ಫೋಟೋಗಳನ್ನು ಸ್ಪಂದನಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಸ್ನೇಹಿತೆಯರ ಜೊತೆ ‘ಬ್ರೈಡ್ ಟು ಬಿ’ ಪಾರ್ಟಿ ಆಚರಿಸಿ ಸಂಭ್ರಮಿಸಿದ್ದರು.

ಮದುವೆಗಾಗಿ ವಿದೇಶದಲ್ಲಿದ್ದ ವರುಣ್ ಮುನಿರಾಜು ಇತ್ತೀಚೆಗೆ ಬೆಂಗಳೂರಿಗೆ ಬಂದಿಳಿದಿದ್ದು, ವಿಮಾನ ನಿಲ್ದಾಣದಲ್ಲಿ ಇಬ್ಬರು ಭೇಟಿಯಾದ ವಿಡಿಯೋ ಗಮನ ಸೆಳೆದಿತ್ತು. ಕಾಲೇಜು ದಿನಗಳಿಂದ ಪರಿಚಿತರಾಗಿದ್ದ ಇಬ್ಬರು ಕೋವಿಡ್ ಲಾಕ್‌ಡೌನ್ ವೇಳೆ ಹತ್ತಿರವಾಗಿ, ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಮದುವೆಯ ಬಳಿಕ ಫ್ಯಾಷನ್ ಕ್ಷೇತ್ರದಲ್ಲಿ ಉದ್ಯಮ ಆರಂಭಿಸುವ ಯೋಜನೆಯನ್ನೂ ಸ್ಪಂದನಾ ಹಂಚಿಕೊಂಡಿದ್ದಾರೆ.

ಸ್ಪಂದನಾ ಸೋಮಣ್ಣ, ಅವರು ‘ನಾನು ನನ್ನ ಕನಸು’, ‘ಗೃಹಪ್ರವೇಶ’, ‘ಕರಿಮಣಿ’ ಹಾಗೂ ತೆಲುಗಿನ ‘ಅಭಿಲಾಷಾ’ ಸೀರಿಯಲ್‌ಗಳಲ್ಲಿ, ‘ದಿಲ್‌ಖುಷ್‌’, ‘ಮರೀಚಿ’ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ‘ಬಾಯ್ಸ್ ವರ್ಸಸ್ ಗರ್ಲ್ಸ್’, ‘ಬಿಗ್‌ ಬಾಸ್‌ ಕನ್ನಡ ಸೀಸನ್12’ ಶೋನಲ್ಲಿ ಸ್ಪಂದನಾ ಸೋಮಣ್ಣ ಸ್ಪರ್ಧಿಸಿ ಮನೆಮಾತಾಗಿದ್ರು. ಸದ್ಯ ಹೊಸ ಜೀವನಕ್ಕೆ ಕಾಲಿಡುವ ಖುಷಿಯಲ್ಲಿದ್ದಾರೆ ಹಾಗೂ ಮದುವೆ ತಯಾರಿಯಲ್ಲಿದ್ದಾರೆ.

Leave a Reply

Your email address will not be published. Required fields are marked *