ನಂದಿನಿ ಮೈಸೂರು
ಮಂಡ್ಯ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುತ್ತಿದೆ.ಮಗನ ಯಾತ್ರೆಗೆ ತಾಯಿ ಸೋನಿಯಾ ಗಾಂಧಿ ಸಹ ಕೈ ಜೋಡಿಸಿದ್ದಾರೆ.ಮಗನ ಪಾದಯಾತ್ರೆ ಜೊತೆ ಸೇರಿ ತಾವೂ ಸಹ ನಡೆದಿದ್ದಾರೆ.
ಪಾದಯಾತ್ರೆ ವೇಳೆ ಸೋನಿಯಾಗಾಂಧಿ ರವರು ಧರಿಸಿದ್ದ ಕಾಲಿನ ಬೂಟ್ ಲೇಸ್ ಸಡಿಲವಾಗಿದೆ.ಸೋನಿಯಾಗಾಂಧಿ ರವರಿಗೆ ಸುಗಮವಾಗಿ ನಡೆಯಲು ಕಷ್ಟವಾಗಿದೆ.ತಾಯಿಗೆ ನೆರವಾದ ಪುತ್ರ ರಾಹುಲ್ ಗಾಂಧಿ ಹಮ್ಮು ಬಿಮ್ಮು ಬದಿಗೊತ್ತಿ ತಾಯಿ ಸೇವೆಗೆ ಮುಂದಾಗಿದ್ದಾರೆ.ಸಾರ್ವಜನಿಕರ ಮುಂದೆ ಕುಕ್ಕರಗಾಲಿನಲ್ಲಿ ಕುಳಿತು ತಾಯಿ ಧರಿಸಿದ್ದ ಬೂಟಿನ ಲೇಸ್ ಬಿಗಿ ಮಾಡಿ ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದಾರೆ.ತಾಯೆ ಸೇವೆ ಮಾಡಿದ ಪುತ್ರನ ಫೋಟೋ ವೈರಲ್ ಆಗಿದೆ.