ನಾ ಕಾಡಿಗೆ ಹೋಗಲ್ಲವೆಂದು ಹಠ ಹಿಡಿದ ಶ್ರೀರಾಮ, ಲಾರಿ ಹತ್ತಿಸಿದ ಅಭಿಮನ್ಯು

 

ನಂದಿನಿ ಮೈಸೂರು

ಅಂಕುಶದಿಂದ ತಿವಿದು ಗಾಯಗಳಾಗಿ ರಕ್ತ ಸುರಿಯುತ್ತಿದ್ದರೂ ಶ್ರೀರಾಮ ಹಿಡಿದ ಹಠ ಬಿಡಲಿಲ್ಲ.ಲಾರಿಗೆ ಸರಪಳಿ ಕಟ್ಟಿ ಎಳೆಸಿದರೂ ಒಂದೆಜ್ಜೆ ಮುಂದೆ ಹೋಗಲಿಲ್ಲ.
ಆನೆಗಳ ಕ್ಷಿಪ್ರ ಕಾರ್ಯ ಪಡೆ ಲಾರಿ ತರಿಸಿ ಶ್ರೀರಾಮನನ್ನು ಹತ್ತಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.20 ಕ್ಕೂ ಹೆಚ್ಚು ಮಾವುತರು ಹಾಗೂ ಕಾವಾಡಿಗಳು ಪ್ರಯಾಸ ಪಟ್ಟರೂ ಲಾರಿ ಹತ್ತಲ್ಲಿಲ್ಲ ಅಭಿಮನ್ಯು ಬಂದರೂ ಕೇರ್ ಮಾಡಿಲ್ಲ.ಲಾರಿ ಹತ್ತಿದ ಶ್ರೀರಾಮನಿಗೆ
ಅಭಿಮನ್ಯು ಬಲವಾಗಿ ದೂಕಿ ಲಾರಿ ಹತ್ತಿಸುವಲ್ಲಿ ಯಶಸ್ವಿಯಾದ.

ಹೌದು ಕಳೆದ 60 ದಿನಗಳಿಂದ ದಸರಾ ಹಬ್ಬಕ್ಕೆ ಬಂದಿದ್ದ ಅಭಿಮನ್ಯು ತಂಡದ ಗಜಪಡೆ ಅರಮನೆ ಅಂಗಳದಲ್ಲಿ ಬೀಡುಬಿಟ್ಟಿದ್ದವು.ಕಾಡಿನೊಳಗೆ ಆಹಾರ ಹುಡುಕಿಕೊಂಡು ಆನೆಗಳು ಕಿಲೋ ಮೀಟರ್ ಗಟ್ಟಲೆ ಹೋಗುತ್ತಿದ್ದವು.ಆದರೆ ಅರಮನೆ ಅಂಗಳದಲ್ಲಿ ವಿಶೇಷ ಆಹಾರ ತಮ್ಮ ಬಳಿಯೇ ಬರುತ್ತಿತ್ತು.ಅರಮನೆ ಅಂಗಳದಲ್ಲಿಯೇ ಊಟ ಮಾಡಿ ಆಟಾಗಿಕೊಂಡಿದ್ದ ಶ್ರೀರಾಮ ಆನೆ ಲಾರಿ ಹತ್ತುವುದಕ್ಕೆ ಸತಾಯಿಸಿದ್ದಾನೆ.

412 ನೇ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿ ನಡೆಸಿಕೊಟ್ಟ ಗಜಪಡೆಗೆ ಇಂದು ಬೀಳ್ಕೊಡುಗೆ ನೀಡಲಾಯಿತು.
ಮೈಸೂರು- ವಿಶ್ವ ವಿಖ್ಯಾತ
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಶ್ರೀರಾಮ ಕಾಡಿಗೆ ತೆರಳಲು ಸತಾಯಿಸಿದ್ದಾನೆ.
ದಸರಾ ಮುಗಿದ ಕಾರಣ ನಾಡಿನಿಂದ ಕಾಡಿಗೆ ತೆರಳಲು ಎಲ್ಲಾ ಆನೆಗಳು ಲಾರಿ ಹತ್ತಿದವು.ಆದರೆ ಶ್ರೀರಾಮ ಆನೆ ಏನೆ ಆದರೂ ಲಾರಿ ಹತ್ತುತ್ತಿರಲಿಲ್ಲ‌. ಇದೇ ಮೊದಲ ಬಾರಿಗೆ ದಸರಾಗೆ ಬಂದಿರುವ ಶ್ರೀರಾಮ ಲಾರಿ ಹತ್ತಲು ಸುಮಾರು ಎರಡು ಗಂಟೆಗಳ ಕಾಲ ಸತಾಯಿಸಿದ.
ಮೈಸೂರು ಅರಮನೆಯಲ್ಲಿ ಲಾರಿ ಹತ್ತಲು 2 ಗಂಟೆ ಸತಾಯಿಸಿದ ಶ್ರೀರಾಮನಿಗೆ ಅಭಿಮನ್ಯುನ್ನೂ ತನ್ನ ಚಾಣಾಕ್ಷತನದಿಂದ ಲಾರಿ ಹತ್ತಿಸಿ ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡ.
ಆ ಎರಡು ಗಂಟೆಯ ಆಪರೇಷನ್ ಶ್ರೀರಾಮ ರೋಚಕವಾಗಿತ್ತು.

Leave a Reply

Your email address will not be published. Required fields are marked *