2ನೇ ಶಾಖೆ ತೆರೆದ ಹೆರಿಟೇಜ್ ಫಿಟ್ನೆಸ್ ಜಿಮ್ ನಟ ಧನ್ವೀರ್ ಚಾಲನೆ

ನಂದಿನಿ ಮೈಸೂರು

ಅತ್ಯಧುನಿಕ ಜಿಮ್ ಸಾಮಗ್ರಿಗಳನ್ನು ಒಳಗೊಂಡ ಹೆರಿಟೇಜ್ ಫಿಟ್ನೆಸ್ ಜಿಮ್ ನ ಎರಡನೇ ಶಾಖೆ ಆರಂಭವಾಗಿದೆ.

ವಿಜಯದಶಮಿಯ ದಿನದಂದು ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ಖ್ಯಾತ ಚಲನಚಿತ್ರ ನಟ ಧನ್ವೀರ ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಎಂಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಆದ ಹರೀಶ್ ಗೌಡರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. 

ಸುರೇಶ್ ಮಾಲೀಕತ್ವದಲ್ಲಿ ಆರೋಗ್ಯವೇ ಭಾಗ್ಯ ಎಂಬ ಶೀರ್ಷಿಕೆಯಡಿಯಲ್ಲಿ  ಸಾರ್ವಜನಿಕರ ಬೇಡಿಕೆಯ ಮೇರೆಗೆ ಅತ್ಯಾಧುನಿಕ ಜಿಮ್ ಸಾಮಗ್ರಿಗಳ ಒಳಗೊಂಡ ಹೆರಿಟೇಜ್ ಫಿಟ್ನೆಸ್ ನ ಎರಡನೇ ಶಾಖೆಯನ್ನು ಸಂಬಂಧಿಕರು ಸ್ನೇಹಿತರು ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಆರಂಭವಾಗಿದೆ.

ಸುತ್ತಮುತ್ತಲಿನ ಸಾರ್ವಜನಿಕರಿಗೆ ತಮ್ಮ ದೇಹದ ಹಾರೈಕೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಬೃಹತ್ ಸಾಮಗ್ರಿಗಳನ್ನು ಒಳಗೊಂಡ ಹೆರಿಟೇಜ್ ಫಿಟ್ನೆಸ್ ಜಿಮ್ ಗೆ ರಿಯಾಯಿತಿ ನೀಡಲಾಗುವುದು. ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

 

ಚಲನಚಿತ್ರ ನಟ ದನ್ವೀರ್ ಹಾಗೂ ಹರೀಶ್ ಗೌಡರವರು ಮಾಲೀಕರಾದ ಸುರೇಶ್ ರವರಿಗೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕರಾದ ಸ್ವೀಟ್ ಮಹಾದೇವ, ಅಮರ್ನಾಥ್ ರಾಜ್ ಅರಸ್, ಮಹೇಶ್ ಕುಮಾರ್, ಸ್ನೇಹಿತರಾದ ವಿಷ್ಣುಪ್ರಿಯ ಗೋಲ್ಡ್ ಕಂಪನಿಯ ನಂಜೇಶ್, ಪ್ರಿಯಾ ನಂಜೇಶ್, ಗೋಲ್ಡ್ ಸುರೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *