ಮೈಸೂರು: 17 ಮಾರ್ಚ್ 2022
ನಂದಿನಿ ಮೈಸೂರು
ದಿ.ನಟ ಪುನೀತ್ ರಾಜಕುಮಾರ್ ರವರ ಜನ್ಮ ದಿನದ ಪ್ರಯುಕ್ತ ಮೈಸೂರಿನ ಸ್ನೇಹಲೋಕ ಗೆಳೆಯರ ಬಳಗದ ವತಿಯಿಂದ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಸರಸ್ವತಿಪುರಂ ಟಿ.ಟಿ.ಎಲ್ ಕಾಲೇಜು ಮುಂಭಾಗ ಆಯೋಜನೆಗೊಂಡಿರುವ ರಕ್ತದಾನ ಶಿಬಿರಕ್ಕೆ
ಹರೀಶ್ ಗೌಡರವರು ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಕೇಕ್ ಕಟ್ ಮಾಡಿ ಸಿಹಿ ಹಂಚಿ ಅಪ್ಪು ಅಭಿಮಾನಿಗಳಿಗೆ ಶುಭಕೋರಿದರು.
ಸುಮಾರು 30 ಕ್ಕೂ ಹೆಚ್ಚು ಅಪ್ಪು ಅಭಿಮಾನಿಗಳು ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾದರು.
ಇದೇ ಸಂದರ್ಭದಲ್ಲಿ ಸ್ನೇಹಲೋಕ ಗೆಳೆಯರ ಬಳಗದ ಸದಸ್ಯರು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಭಾಗಿಯಾಗಿದ್ದರು.