ಮೈಸೂರು:17 ಮಾರ್ಚ್ 2022
ನಂದಿನಿ ಮೈಸೂರು
ಶಿವ ಆಡಿಯೋ ಸಿನಿ ಕ್ರಿಯೇಷನ್ ಬ್ಯಾನರ್‌ನಡಿ ಹುಲಿದುರ್ಗಾ ಖ್ಯಾತಿಯ ನಟ ಸುಪ್ರೀತ್ ಅಭಿನಯದ ‘ ರಾಘವ್ ‘ ಚಿತ್ರದ ಶೀರ್ಷಿಕೆ ( ಟೈಟಲ್ ) ಯನ್ನು ಚಿತ್ರತಂಡದಿಂದ ಅನಾವರಣಗೊಳಿಸಲಾಯಿತು .
ನಟ ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಚಿತ್ರದ ಶೀರ್ಷಿಕೆ ಆನಾವರಣಗೊಳಿಸಿ ನಂತರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು .
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ವಿಕ್ರಮ್ ಮಾತನಾಡಿ , ಏ .20 ರಿಂದ ಚಿತ್ರೀಕರಣ ಆರಂಭವಾಗಲಿದ್ದು , ಮೈಸೂರು , ನನ್ನ ಮತ್ತು ಸುಪ್ರೀತ್ ಕಾಂಬಿನೇಷನ್‌ನ ಮೊದಲ ಚಿತ್ರ ‘ ಹುಲಿದುರ್ಗಾ ‘ ಬಿಡುಗಡೆಯಾಗಿ ಲಾಕ್‌ಡೇನ್ ಹೊಡೆತಕ್ಕೆ ಸಿಲುಕಿತು . ಇದೀಗ ಕಮರ್ಷಿಯಲ್ ಮತ್ತು ಸಾಮಾಜಿಕ ಸಂದೇಶವುಳ್ಳ ‘ ರಾಘವ್ ‘ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮತ್ತೊಂದು ಒಳ್ಳೆಯ ಸಿನಿಮಾ ನೀಡಲು ಮುಂದಾಗಿದ್ದೇವೆ ಎಂದರು .
ನಟ ಸುಪ್ರೀತ್, ಕಲಾವಿದರಾದ ಚಂದ್ರಪ್ರಭ , ಮಂಜು ಕಾಳಿಪ್ರಸಾದ್ , ಕುಮಾರ್ ಅರಸೇಗೌಡ ಗೋಷ್ಠಿಯಲ್ಲಿ ಇದ್ದರು .